ಕರ್ನಾಟಕ

karnataka

ಹರಿವರಾಸನಂ ಆಚರಣೆಗೆ ಹರಿದು ಬಂದ ಭಕ್ತರ ದಂಡು

ETV Bharat / videos

'ಹರಿವರಾಸನಂ' ಆಚರಣೆ: ಭಕ್ತರಿಂದ ತುಂಬಿ ತುಳುಕುತ್ತಿದೆ ಶಬರಿಮಲೆ- ವಿಡಿಯೋ - ಅಯ್ಯಪ್ಪನ ನಾಮಸ್ಮರಣೆ

By ETV Bharat Karnataka Team

Published : Nov 19, 2023, 9:55 AM IST

ಕೇರಳ: ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಇದೀಗ ಭಕ್ತರಿಂದ ತುಂಬಿ ತುಳುಕುತ್ತಿದೆ. ಪಥನಂತಿಟ್ಟಾದಲ್ಲಿರುವ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ‘ಹರಿವರಾಸನಂ’ ಆಚರಣೆಗೆ ಭಕ್ತರ ದಂಡೇ ಹರಿದು ಬರುತ್ತಿದ್ದು, ದೇವರ ದರ್ಶನ ಪಡೆಯುತ್ತಿದ್ದಾರೆ. 

ಶಬರಿಮಲೆಯ ಇಡೀ ಬೆಟ್ಟವೇ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಿರುವಂತೆ ಭಾಸವಾಗುತ್ತಿದೆ. ಸ್ವಾಮಿಯ ದರ್ಶನಕ್ಕೆ ವಿವಿಧೆಡೆಯಿಂದ ಭಕ್ತಕೋಟಿ ಸಾಲಾಗಿ ಸಾಗಿ ಬರುತ್ತಿದೆ. ಈ ವರ್ಷದ ಮಂಡಲ-ಮಕರವಿಳಕ್ಕು ಆಚರಣೆ ಶುಕ್ರವಾರದಿಂದ ಶುರುವಾಗಿದೆ. ಎರಡು ತಿಂಗಳ ಸುದೀರ್ಘ ದರ್ಶನದ ಅಂಗವಾಗಿ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಅಯ್ಯಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಶಬರಿಮಲೆ ಯಾತ್ರೆ; ಭಕ್ತರ ಹಿತದೃಷ್ಟಿಯಿಂದ ಭಾರಿ ಪೊಲೀಸ್​ ಭದ್ರತೆ

ಇದರೊಂದಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸಾವಿರಾರು ಯಾತ್ರಾರ್ಥಿಗಳು ಹಾಗೂ ಭಕ್ತರು ಶಬರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ದಕ್ಷಿಣ ರಾಜ್ಯಗಳಿಂದ ಹೆಚ್ಚು ಭಕ್ತರ ಆಗಮನವಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿರುವುದು ಕಂಡುಬಂತು. 

ಇದನ್ನೂ ಓದಿ:ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ: ಭಕ್ತರಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ

ABOUT THE AUTHOR

...view details