ಕೃಷ್ಣಾನದಿ ಸ್ವಚ್ಛತೆ ನಡೆಸಿದ ಮಹಾಳಿಂಗರಾಯ ಶ್ರೀಗೆ ಭಕ್ತರ ಸಾಥ್ - ವಿಜಯನಗರದಲ್ಲಿ ಮಹಾಳಿಂಗರಾಯ ಶ್ರೀಗಳ ಭಕ್ತರಿಂದ ಕೃಷ್ಣಾನದಿ ಸ್ವಚ್ಛತೆ
ವಿಜಯಪುರ: ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸುಕ್ಷೇತ್ರ ಹುಲಿಜಂತಿ ಮಾಳಿಂಗರಾಯ ಪೀಠದ ಮಾಳಿಂಗರಾಯ ಸ್ವಾಮೀಜಿ ನೇತೃತ್ವದಲ್ಲಿ ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೃಷ್ಣಾ ನದಿ ತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಮಾಳಿಂಗರಾಯ ಸ್ವಾಮೀಜಿಗೆ ವಿಜಯಪುರ ಜಿಲ್ಲೆಯ ಬೊಮ್ಮನ ಜೋಗಿಯ ಶಂಕರಲಿಂಗ ಸ್ವಾಮೀಜಿ ಸೇರಿದಂತೆ ಯುವಕರು ಸಾಥ್ ನೀಡಿದ್ರು. ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಹಿನ್ನೀರಿನ ಬಳಿಯ ಚಂದ್ರಮ್ಮ ದೇವಸ್ಥಾನದ ಬಳಿಯ ನದಿ ತೀರವನ್ನು ಸ್ವಚ್ಛಗೊಳಿಸಿದರು. ಸುಮಾರು 2 ಕಿಲೋ ಮೀಟರ್ ನದಿ ತೀರದಲ್ಲಿ ಬಿದ್ದಿದ್ದ ಕಸ ಬಟ್ಟೆ ಬರೆ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಬೇರೆಡೆ ಸಾಗಿಸಿದರು. ಶ್ರೀಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:24 PM IST