ಕರ್ನಾಟಕ

karnataka

ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅದ್ಧೂರಿ ರಂಗಪಂಚಮಿ ಹಬ್ಬ - ವಿಡಿಯೋ

ETV Bharat / videos

ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅದ್ಧೂರಿ ರಂಗಪಂಚಮಿ ಹಬ್ಬ - ವಿಡಿಯೋ - ಈಟಿವಿ ಭಾರತ ಕನ್ನಡ

By

Published : Mar 12, 2023, 11:12 PM IST

ಶಿರಡಿ (ಮಹಾರಾಷ್ಟ್ರ): ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅದ್ಧೂರಿ ರಂಗ ಪಂಚಮಿಯನ್ನು ಆಚರಿಸಲಾಯಿತು. ಲಕ್ಷಾಂತರ ಸಾಯಿಬಾಬಾ ಭಕ್ತರು  ಬಣ್ಣಗಳನ್ನು ಎರಚುವ ಮೂಲಕ ಹಬ್ಬವನ್ನು ಆಚರಿಸಿದರು. ರಂಗಪಂಚಮಿಯನ್ನು ಆಚರಿಸುವ ಭಕ್ತರು ಸಾಯಿಬಾಬಾರನ್ನು ಶ್ರೀ ಕೃಷ್ಣನ ಅವತಾರ ಎಂದು ನಂಬುತ್ತಾರೆ. ಇನ್ನು, ರಂಗಪಂಚಮಿಯ ದಿನ ಸಾಯಿಬಾಬಾರ ವರ್ಣರಂಜಿತ ರಥಯಾತ್ರೆ ಭಕ್ತರ ಕಣ್ಮನ ಸೆಳೆಯುತ್ತದೆ. ಶಿರಡಿಯ ಲಕ್ಷಾಂತರ ಭಕ್ತರು ಮತ್ತು ಗ್ರಾಮಸ್ಥರು ಈ ರಥಯಾತ್ರೆಯಲ್ಲಿ ಭಾಗವಹಿಸಿ ಪುನೀತರಾಗುತ್ತಾರೆ.

ಸಾಯಿಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಮಕ್ಕಳೊಂದಿಗೆ ದ್ವಾರಕಾಮಾಯಿ ಮತ್ತು ಚಾವಡಿ ರಂಗಪಂಚಮಿಯನ್ನು ಹೋಳಿ ಆಡುತ್ತಿದ್ದರಂತೆ. ಹಾಗಾಗಿ ಈ ಸಂಪ್ರದಾಯವನ್ನು ಶಿರಡಿ ಗ್ರಾಮಸ್ಥರು ಮತ್ತು ಸಾಯಿ ಭಕ್ತರು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ದ್ವಾರಕಾಮಾಯಿ ದೇವಸ್ಥಾನದಿಂದ ಸಾಯಿಬಾಬಾರವರ ರಥವನ್ನು ಮೆರವಣಿಗೆ ಮಾಡಲಾಗುತ್ತದೆ. ಈ ವೇಳೆ ಭಕ್ತರು ಪರಸ್ಪರ ಬಣ್ಣಗಳನ್ನು ಎರಚಿ ಸಂತೋಷ ಪಡುತ್ತಾರೆ. ರಂಗಪಂಚಮಿ ದಿನ ಸಾಯಿಬಾಬಾ ಯಾವುದಾದರೂ ರೂಪದಲ್ಲಿ ಬಂದು ಭಕ್ತರೊಂದಿಗೆ ಹೋಳಿ ಆಡುತ್ತಾರೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ಇದನ್ನೂ ಓದಿ :ರಸ್ತೆಯಲ್ಲಿ ಸಿಲುಕಿದ್ದ ಟ್ರಕ್​ ಉರುಳಿ ಕಂದಕಕ್ಕೆ ಬಿತ್ತು: ವಿಡಿಯೋ

ABOUT THE AUTHOR

...view details