ಕರ್ನಾಟಕ

karnataka

ETV Bharat / videos

ದೀಪಾವಳಿ ಸಂಭ್ರಮ.. ಸ್ವರ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿದ ಭಕ್ತರು - ಬಂದಿ ಛೋರ್‌ ದಿವಸ್‌

By

Published : Oct 24, 2022, 2:51 PM IST

Updated : Feb 3, 2023, 8:29 PM IST

ಅಮೃತಸರ(ಪಂಜಾಬ್​​): ದೀಪಾವಳಿ ಹಬ್ಬವನ್ನು ಅಮೃತಸರದಲ್ಲಿ 'ಬಂದಿ ಛೋರ್‌ ದಿವಸ್‌' (ವಿಮೋಚನೆಯ ದಿನ) ದಿನವಾಗಿ ಆಚರಿಸಲಾಗುತ್ತದೆ. ಚಕ್ರವರ್ತಿ ಜಹಾಂಗೀರನು 1620ರಲ್ಲಿ ಸಿಖ್ಖರ ಆರನೇ ಗುರು ಹರಗೋವಿಂದ್‌ ಸಿಂಗ್‌ ಹಾಗೂ 52 ಮಂದಿ ರಾಜರುಗಳನ್ನು ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿಸಿಟ್ಟಿದ್ದ. ಹರಗೋವಿಂದ ಸಿಂಗ್‌ ಅವರು ಎಲ್ಲರನ್ನೂ ಬಿಡಿಸಿ ತಂದಿದ್ದರು. ಆ ದಿನವನ್ನು ಸಿಖ್ಖರು 'ಬಂದಿ ಛೋರ್‌ ದಿವಸ್‌' (ಬಂಧ ಮುಕ್ತಿ ದಿನ) ರೂಪದಲ್ಲಿ ಆಚರಿಸುತ್ತಾರೆ. ಭಕ್ತರು ಸ್ವರ್ಣಮಂದಿರ (ಗೋಲ್ಡನ್ ಟೆಂಪಲ್‌)ದ ಪವಿತ್ರ ಸರೋವರದಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಪುಣ್ಯ ಮಹೋತ್ಸವದಂದು ಇಲ್ಲಿಗೆ ಬರುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ ಎನ್ನುತ್ತಾರೆ ಭಕ್ತರು.
Last Updated : Feb 3, 2023, 8:29 PM IST

ABOUT THE AUTHOR

...view details