'ದೇವೇಗೌಡರು ಈ ರಾಜ್ಯದ ಪಿತಾಮಹ, ಆರೂವರೆ ಕೋಟಿ ಜನರ ತಂದೆ': ಸಿಎಂ ಇಬ್ರಾಹಿಂ - ಕರ್ನಾಟಕದ ತಂದೆ ದೇವೇಗೌಡ
ಬೆಂಗಳೂರು: ದೇವೇಗೌಡರು ಈ ರಾಜ್ಯದ ಪಿತಾಮಹ. ಕರ್ನಾಟಕದ ಆರೂವರೆ ಕೋಟಿ ಜನರ ತಂದೆ. ದೇವೇಗೌಡರು ಅಜರಾಮರರು. ಅವರಿಗೆ ಸಾವಿಲ್ಲ. ಸೂರ್ಯ, ಚಂದ್ರ ಇರೋವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ಜನತಾಮಿತ್ರ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಶ್ಲಾಘಿಸಿದರು. ಜೊತೆಗೆ ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಕಿಡಿಕಾರಿದ ಇಬ್ರಾಹಿಂ, ದೇವೇಗೌಡರು ನಿಮ್ಮನ್ನು ಶಾಸಕ, ಸಚಿವರನ್ನಾಗಿಸಿದ್ದರು. ಈಗ ಅವರ ಹುಟ್ಟು, ಸಾವಿನ ಬಗ್ಗೆ ಮಾತನಾಡ್ತೀರಿ. ರಾಜಣ್ಣ ನಿಮಗೆ ಅಪ್ಪ ಇಲ್ವಾ? ಎಂದು ಆಕ್ರೋಶ ಹೊರಹಾಕಿದರು.
Last Updated : Feb 3, 2023, 8:24 PM IST