ಕರ್ನಾಟಕ

karnataka

ಮನೋರಂಜನ್ ಪೋಷಕರ ವಿಚಾರಣೆ

ETV Bharat / videos

ಮೈಸೂರು: ಎರಡನೇ ದಿನವೂ ದೆಹಲಿ ಪೊಲೀಸರಿಂದ ಮನೋರಂಜನ್ ಪೋಷಕರ ವಿಚಾರಣೆ - ವೀಡಿಯೋ - ETV Bharat Karnataka

By ETV Bharat Karnataka Team

Published : Dec 19, 2023, 8:13 PM IST

ಮೈಸೂರು :ನೂತನಸಂಸತ್ ಭವನದ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತನಾಗಿರುವ ಮೈಸೂರಿನ ಎರಡನೇ ಆರೋಪಿ ಮನೋರಂಜನ್ ಮನೆಯಲ್ಲಿ ಎರಡನೇ ದಿನವೂ ದೆಹಲಿ ಪೊಲೀಸರು ಪೋಷಕರನ್ನು ವಿಚಾರಣೆಗೆ ಒಳಪಡಿಸಿ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಸೋಮವಾರ ದೆಹಲಿಯಿಂದ ಮಹಿಳಾ ಪೊಲೀಸ್​ ಅಧಿಕಾರಿ ಸೇರಿದಂತೆ ಮೂವರು ಪೊಲೀಸರ ತಂಡ ಮನೋರಂಜನ್ ಮನೆಗೆ ನಿನ್ನೆ ದಿನವಿಡೀ ಮನೆಯಲ್ಲಿ ತಪಾಸಣೆ ನಡೆಸಿತ್ತು. ಬಳಿಕ ಮನೋರಂಜನ್ ಬಳಸುತ್ತಿದ್ದ ಕೆಲವು ವಸ್ತುಗಳು ಹಾಗೂ ಪುಸ್ತಕಗಳನ್ನು ತೆಗೆದುಕೊಂಡು ಹೋಗಿತ್ತು. ಇಂದು ಮತ್ತೆ ದೆಹಲಿ ಪೋಲಿಸರು ಆರೋಪಿ ಮನೆಗೆ ಬೆಳಗ್ಗೆ ಆಗಮಿಸಿದ್ದು, ಮಧ್ಯಾಹ್ನದ ವರೆಗೆ ವಿಚಾರಣೆ ನಡೆಸಿ ಪೋಷಕರಿಂದ ಕೆಲವು ಮಾಹಿತಿಗಳನ್ನು ಪಡೆದುಕೊಂಡು ವಾಪಸ್ ಆಗಿದ್ದಾರೆ.

ಕಳೆದ 6 ದಿನಗಳಿಂದ ಸತತವಾಗಿ ಮನೋರಂಜನ್ ತಂದೆ ದೇವರಾಜೇಗೌಡ ಅವರು ವಾಸವಿರುವ ವಿಜಯನಗರದ ಎರಡನೇ ಹಂತದ ಮನೆಯ ಬಳಿ ಮಾಧ್ಯಮದವರು ಇದ್ದು, ಇಂದು ವಿಚಾರಣೆ ಬಳಿಕ ಹೊರ ಬಂದ ದೇವರಾಜೇಗೌಡ ಅವರು, ದಯವಿಟ್ಟು ಹೊರಟು ಹೋಗಿ. ಏನು ಆಗಿಲ್ಲ. ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ ಎಂದು ಮಾಧ್ಯಮದವರಿಗೆ ಕೈ ಮುಗಿದು ಹೊರಟು ಹೋದರು. 

ಇದನ್ನೂ ಓದಿ :ಸಂಸತ್ ಭದ್ರತಾ ಲೋಪ ಪ್ರಕರಣ: ಮೈಸೂರಿನ ಮನೋರಂಜನ್ ಮನೆಯಲ್ಲಿ ದೆಹಲಿ ಪೊಲೀಸರಿಂದ ಶೋಧ

ABOUT THE AUTHOR

...view details