ಕರ್ನಾಟಕ

karnataka

ಜಲಾವೃತವಾದ ರಸ್ತೆಯಲ್ಲೇ ವಾಹನ ಸಂಚಾರ

ETV Bharat / videos

ಮಹಾಪ್ರವಾಹಕ್ಕೆ ತತ್ತರಿಸಿದ ದೆಹಲಿ; ಜಲಾವೃತವಾದ ರಸ್ತೆಗಳಲ್ಲೇ ವಾಹನ ಸಂಚಾರ: ಡ್ರೋನ್ ದೃಶ್ಯ - Delhi Waterlogging situation on ITO road

By

Published : Jul 17, 2023, 11:01 AM IST

Updated : Jul 17, 2023, 11:32 AM IST

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಯಮುನಾ ನದಿಯ ನೀರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದೆ. ಪರಿಣಾಮ, ಸಂಪೂರ್ಣವಾಗಿ ಜಲಾವೃತವಾಗಿದ್ದ ದೆಹಲಿಯ ಐಟಿಒ ರಸ್ತೆಯಲ್ಲಿ ವಾಹನ ಸಂಚಾರ ಪ್ರಾರಂಭವಾಗಿದೆ. ನೀರಿನ ಮಧ್ಯೆಯೇ ಸವಾರರು ಸಂಚರಿಸುತ್ತಿರುವ ದೃಶ್ಯ ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾಗಿದೆ.  

ಉಕ್ಕಿ ಹರಿಯುತ್ತಿರುವ ಯಮುನೆಯ ಮಹಾಪ್ರವಾಹದಿಂದ ಹಲವು ರಸ್ತೆಗಳು, ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡ ಬಾಧಿತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ.

ಇಂದು ಬೆಳಗ್ಗೆ 9 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟವು 205.58 ಮೀಟರ್‌ ದಾಖಲಾಗಿದೆ. ಬೆಳಗ್ಗೆ 8 ಗಂಟೆಗೆ ದಾಖಲಾದ 205.50 ಮೀಟರ್​ಗಿಂತ ಸ್ವಲ್ಪ ಹೆಚ್ಚಳ ಕಂಡಿದೆ. ಇದಕ್ಕೂ ಮುನ್ನ, ಭಾನುವಾರ ರಾತ್ರಿ 8 ಗಂಟೆಗೆ ನೀರಿನ ಮಟ್ಟ 205.56 ಮೀಟರ್ ದಾಖಲಾಗಿತ್ತು.

ಇದನ್ನೂ ಓದಿ :ಯಮುನಾ ನದಿ ಪ್ರವಾಹಕ್ಕೆ ಕುಸಿದು ಬಿದ್ದ ಮೂರು ಅಂತಸ್ತಿನ ಮನೆ.. ವಿಡಿಯೋ

Last Updated : Jul 17, 2023, 11:32 AM IST

ABOUT THE AUTHOR

...view details