ಕರ್ನಾಟಕ

karnataka

ದೇವರಾಜ ಅರಸ ಕಾಲೋನಿ ನಿವಾಸಿಗಳು ಪ್ರತಿಭಟನೆ

ETV Bharat / videos

ಮೂಲ ಸೌಕರ್ಯ ಒದಗಿಸಲು ವಿಳಂಬ: ಬೆಳಗಾವಿ ಪಾಲಿಕೆ ವಿರುದ್ಧ ದೇವರಾಜ ಅರಸ ಕಾಲೋನಿ ನಿವಾಸಿಗಳ ಪ್ರತಿಭಟನೆ - ಮೂಲ ಸೌಕರ್ಯ ಒದಗಿಸಲು ವಿಳಂಬ

By ETV Bharat Karnataka Team

Published : Sep 24, 2023, 8:31 PM IST

ಬೆಳಗಾವಿ: ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ದೇವರಾಜ ಅರಸ ಕಾಲೋನಿ ನಿವಾಸಿಗಳು ವೆಲ್ಫೇರ್​ ಸೊಸೈಟಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. 40 ವರ್ಷಗಳ ಹಿಂದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣಗೊಂಡ ದೇವರಾಜ ಅರಸ ಕಾಲೋನಿ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಬುಡಾದಿಂದ ಮಹಾನಗರ ಪಾಲಿಕೆಗೆ ಇದು ಹಸ್ತಾಂತರವಾಗಿದೆ. ಇಲ್ಲಿನ ನಿವಾಸಿಗಳು ಪಾಲಿಕೆಗೆ ತೆರಿಗೆ ತುಂಬುತ್ತಿದ್ದರೂ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ಇದರಿಂದ ಅಭಿವೃದ್ಧಿ ನಿರ್ಲಕ್ಷ್ಯದಿಂದಾಗಿ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದರು. ಬುಡಾದ ಮೊದಲ ಯೋಜನೆ ಇದಾಗಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಪಾಲಿಕೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು. 

ಈ ವೇಳೆ ನಿವಾಸಿಗಳು ಮಾತನಾಡಿ, ಹೆಸರಿಗೆ ತಕ್ಕ ಹಾಗೆ ದೇವರಾಜ ಅರಸ ಕಾಲೋನಿ ಅಭಿವೃದ್ಧಿ ಆಗಿಲ್ಲ. ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಸಮರ್ಪಕ ಬಸ್ ಸೇವೆ ಇಲ್ಲದ್ದರಿಂದ ಜನ ನಿತ್ಯ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು. 15 ದಿನಗಳಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬೆಳಗಾವಿ ಮತ್ತು ಬಾಗಲಕೋಟ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂಓದಿ:ಬೆಳಗಾವಿಯಲ್ಲಿ ನಿಗದಿಗಿಂತ ಹೆಚ್ಚು ಭೂ ಬಾಡಿಗೆ ವಸೂಲಿ ಆರೋಪ.. ಗುತ್ತಿಗೆದಾರನ ವಿರುದ್ಧ ಬೀದಿಬದಿ ವ್ಯಾಪಾರಿಗಳ ಆಕ್ರೋಶ

ABOUT THE AUTHOR

...view details