ಮಳೆ, ಪ್ರವಾಹದ ಅಬ್ಬರಕ್ಕೆ ಕೊಚ್ಚಿಹೋಯ್ತು ರಕ್ಷಣಾ ಕಾಲೇಜು ಕಟ್ಟಡ - ವಿಡಿಯೋ - ಉತ್ತರಾಖಂಡದಲ್ಲಿ ಭೀಕರ ಮಳೆ
ಡೆಹ್ರಾಡೂನ್ (ಉತ್ತರಾಖಂಡ):ಉತ್ತರಾಖಂಡದಲ್ಲಿ ಭೀಕರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಪರಿಸ್ಥಿತಿಯಲ್ಲಿ, ಭೂಕುಸಿತವು ಜನರ ಜೀವಕ್ಕೆ ಅಪಾಯ ಉಂಟು ಮಾಡಿದೆ. ಡೆಹ್ರಾಡೂನ್‌ನ ಮಾಲ್ದೇವ್ತಾ ಪ್ರದೇಶದಲ್ಲಿ ಡೆಹ್ರಾಡೂನ್ ರಕ್ಷಣಾ ಕಾಲೇಜು ಕಟ್ಟಡ ಕೊಚ್ಚಿಹೋಗಿದೆ. ಮಳೆ ಮತ್ತು ಪ್ರವಾಹದಿಂದಾಗಿ ಭವ್ಯ ಕಟ್ಟಡದ ಒಂದು ಭಾಗ ಕೊಚ್ಚಿಹೋಗಿದೆ. ಕಳೆದ ವರ್ಷವೂ ಮಳೆಗಾಲದಲ್ಲಿ ಮಾಲ್ದೇವ್ತಾ ಪ್ರದೇಶದಲ್ಲಿ ಮೇಘಸ್ಫೋಟದ ಘಟನೆ ಸಂಭವಿಸಿತ್ತು. ಆಗಲೂ ಕೂಡಾ ಹಲವು ಅವಘಡಗಳು ಸಂಭವಿಸಿದ್ದವು.
ಈ ಬಾರಿಯೂ ಅಬ್ಬರದ ಮಳೆಯಿಂದ ಅಂತಹದ್ದೇ ದೃಶ್ಯಗಳು ಗೋಚರಿಸುತ್ತಿವೆ. ಮಳೆ ಮತ್ತು ಪ್ರವಾಹದ ನೀರು ಮಾಲ್ದೇವ್ತಾ ಪ್ರದೇಶದಲ್ಲಿ ಮನೆಗಳಿಗೆ ತುಂಬುತ್ತಿದೆ. ರೆಸಾರ್ಟ್‌ಗಳೂ ಮುಳುಗಡೆಯಾಗಿವೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಜಲಾವೃತಗೊಂಡಿದೆ. ಇಂದು (ಸೋಮವಾರ) ಇಡೀ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಸೂಚಿಸಿತ್ತು. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಕೂಡಾ ಘೋಷಣೆ ಮಾಡಲಾಗಿದೆ. ಇದಲ್ಲದೇ ಆಗಸ್ಟ್ 17ರ ವರೆಗೆ ರಾಜ್ಯದ ಎಲ್ಲಾ ಭಾಗಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸದ್ಯದ ಸ್ಥಿತಿಗತಿಗಳನ್ನು ಗಮನಿಸಿದರೆ, ಮುಂದಿನ 24 ಗಂಟೆ ಉತ್ತರಾಖಂಡ ರಾಜ್ಯಕ್ಕೆ ಮತ್ತಷ್ಟು ಆತಂಕ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:ವರುಣನ ರುದ್ರಾವತಾರ.. ಶಿವನ ದೇವಸ್ಥಾನದ ಮೇಲೆ ಭೂ ಕುಸಿತ, 9 ಜನ ಸಾವು, 20 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ!