'ನಮಗೆ ಯಾವ ಆಪರೇಷನ್ ಭೀತಿಯೂ ಇಲ್ಲ': ಹೈದರಾಬಾದ್ನಲ್ಲಿ ಡಿಕೆಶಿ - ಡಿಸಿಎಂ ಡಿ ಕೆ ಶಿವಕುಮಾರ್ ಹೈದರಾಬಾದ್ನತ್ತ ಪ್ರಯಾಣ
Published : Dec 2, 2023, 10:15 PM IST
ಬೆಂಗಳೂರು: ನಾಳೆ ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹೈದರಾಬಾದ್ನಲ್ಲಿದ್ದಾರೆ. ತೆಲಂಗಾಣಕ್ಕೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಜನ ನಮಗೆ ಆಶೀರ್ವಾದ ಮಾಡುವ ನಂಬಿಕೆ ಇದೆ. ನಾಳೆ 12 ಗಂಟೆಗೆ ಏನಾಗುತ್ತದೆ ಎಂದು ನೋಡೋಣ ..? ಎಂದರು.
ನಮ್ಮ ಪಕ್ಷದ ಎಲ್ಲರೂ ಬಹಳ ವಿಶ್ವಾಸದಲ್ಲಿದ್ದಾರೆ. ಎಲ್ಲರಿಗಿಂತ ಹೆಚ್ಚು ವಿಶ್ವಾಸ ನಮಗಿದೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂಬ ವಿಶ್ವಾಸವಿದೆ. ನಮ್ಮ ಚುನಾವಣೆಗೂ ಅಕ್ಕ ಪಕ್ಕದ ರಾಜ್ಯಗಳಿಂದ ಮುನ್ನೂರಕ್ಕೂ ಅಧಿಕ ಜನ ಬಂದು ಕೆಲಸ ಮಾಡಿದ್ರು. ಅದೇ ರೀತಿ ಅಲ್ಲಿಗೂ ಹೋಗಿ ನಮ್ಮವರು ಕೆಲಸ ಮಾಡ್ತಿದ್ದಾರೆ ಅಷ್ಟೆ ಎಂದು ತಿಳಿಸಿದರು.
ನಮಗೆ ಯಾವ ಆಪರೇಷನ್ ಭೀತಿಯೂ ಇಲ್ಲ, ಯಾವುದೂ ಇಲ್ಲ. ನಾಳೆ ಮಧ್ಯಾಹ್ನದ ವೇಳೆಗೆ ಎಲ್ಲವೂ ಗೊತ್ತಾಗಲಿದೆ ಎಂದು ಹೈದರಾಬಾದ್ ಗೆ ತೆರಳುವ ಮುನ್ನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಇದನ್ನೂ ಓದಿ :ಸ್ವಪಕ್ಷೀಯರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ್