DK Shivakumar: ಮಧ್ಯಪ್ರದೇಶದ ಸಾಂಪ್ರದಾಯಿಕ ಕಲರ್‌ಫುಲ್ ಪೇಟ ಧರಿಸಿ ಡಿಸಿಎಂ ಡಿಕೆಶಿ ಭಾಷಣ- ವಿಡಿಯೋ - ಶಕ್ತಿ ಯೋಜನೆ
ಬೆಂಗಳೂರು: ಎರಡು ದಿನಗಳ ಮಧ್ಯಪ್ರದೇಶ ಪ್ರವಾಸ ಮುಗಿಸಿ ರಾಜ್ಯಕ್ಕೆ ವಾಪಸಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ 'ಶಕ್ತಿ ಯೋಜನೆ'ಯ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಅವರು ಮಧ್ಯಪ್ರದೇಶ ರಾಜ್ಯದ ಸಾಂಪ್ರದಾಯಿಕ ವರ್ಣರಂಜಿತ ಪೇಟ ಧರಿಸಿ ಆಗಮಿಸಿ ಎಲ್ಲರ ಗಮನ ಸೆಳೆದರು. ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಉಪ ಮುಖ್ಯಮಂತ್ರಿ, "ಇಡೀ ರಾಜ್ಯದಲ್ಲಿ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ಹೆಣ್ಣು ಕುಟುಂಬದ ಕಣ್ಣು. ನಮ್ಮಲ್ಲಿ ಮೊದಲಿಗೆ ಹೆಣ್ಣಿಗೆ ಆದ್ಯತೆ ಕೊಡುತ್ತೇವೆ. ಇದು ಭಾರತದ ಸಂಸ್ಕೃತಿ" ಎಂದರು.
"ಡಬಲ್ ಇಂಜಿನ್ ಸರ್ಕಾರ ಇದ್ದರೂ ನಮ್ಮ ನಡತೆ, ನುಡಿ ಮೇಲೆ ನಂಬಿಕೆ ಇಟ್ಟು ರಾಜ್ಯದ ಜನರು ನಮಗೆ ಅವಕಾಶ ನೀಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ, ಬದಲಾವಣೆ ತಂದು ಕೊಟ್ಟ ಪಕ್ಷ ನಮ್ಮದು. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ಬಹುತೇಕ ಶೇ 90 ರಷ್ಟು ಕೊಟ್ಟ ಮಾತು ಉಳಿಸಿಕೊಂಡು, ನಮ್ಮ ಕಾರ್ಯ ನಿರ್ವಹಿಸಿದ್ದೇವೆ. ನನ್ನ ಬಿಜೆಪಿ, ಜನತಾ ದಳ ಸ್ನೇಹಿತರು ಟೀಕೆಗಳ ಸುರಿಮಳೆ ಹರಿಸುತ್ತಿದ್ದಾರೆ. ಅವರಿಗೆ ಉತ್ತರ ಕೊಡಲು ನಮ್ಮಲ್ಲಿ ಸಾಮರ್ಥ್ಯವಿಲ್ಲ. ಏಕೆಂದರೆ ಉತ್ತರ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ" ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ:Free bus: ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರಿಗೆ ಫ್ರೀ ಬಸ್ ಸೇವೆ ಜಾರಿ