ಕರ್ನಾಟಕ

karnataka

ಕುಣಿದ ಕುಪ್ಪಳಿಸಿದ ಯುವತಿಯರು

ETV Bharat / videos

ದಾವಣಗೆರೆ: ಹೊಸ ವರ್ಷದ ಜೋಶ್‌, ಕುಣಿದು ಕುಪ್ಪಳಿಸಿದ ಯುವಜನತೆ - ಹೊಸ ವರ್ಷ

By ETV Bharat Karnataka Team

Published : Jan 1, 2024, 9:27 AM IST

ದಾವಣಗೆರೆ: ಬೆಣ್ಣೆ ನಗರಿಯ ಮಂದಿ 2023ಕ್ಕೆ ವಿದಾಯ ಹೇಳಿದರು. ಹೊಸವರ್ಷ 2024 ಅನ್ನು ನವೋಲ್ಲಾಸದಿಂದ ಅಪ್ಪಿಕೊಂಡರು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಜೋರಾಗಿ ಕೂಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು ಕೇಕ್ ಕಟ್ ಮಾಡಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಮತ್ತೆ ಕೆಲವರು ವಿವಿಧ ಭಾಷೆಗಳ ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಪಟಾಕಿಯ ಸದ್ದು ಗದ್ದಲೂ ಜೋರಾಗಿತ್ತು. ನಗರದ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ನ್ಯೂ ಇಯರ್ ಕಾರ್ಯಕ್ರಮದಲ್ಲಿ ನೂರಾರು ಯುವಕ, ಯುವತಿಯರು ಪಾಲ್ಗೊಂಡು​ ಖುಷಿಪಟ್ಟರು. ಕನ್ನಡ, ಹಿಂದಿ ಹಾಡುಗಳಿಗೆ ಯುವತಿಯರು ಭರ್ಜರಿಯಾಗಿಯೇ ಸ್ಟೆಪ್ಸ್‌ ಹಾಕಿದರು. ನಾವೂ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಹಿಂದಿ ಹಾಡಿಗೆ ಯುವಕರು ಮೈ ಕುಣಿಸಿದರು.

ದಾವಣಗೆರೆ ನಗರದ ಎಸ್ಎಸ್ ಬಡಾವಣೆಯ ಮನೆಯಲ್ಲಿ ಯುವತಿಯರು ಸೇರಿ ಕೇಕ್ ಕಟ್ ಮಾಡಿ ಹೊಸವರ್ಷವನ್ನು ಆಲಿಂಗಿಸಿಕೊಂಡರು. ಮೇಕಪ್ ಆರ್ಟಿಸ್ಟ್ ರೂಪಾ ಚಿಕಿನಿ ಚಮೇಲಿ ಹಿಂದಿ ಗೀತೆಗೆ ಕುಣಿದು ನೆರೆದಿದ್ದವರನ್ನು ರಂಜಿಸಿ ಗಮನ ಸೆಳೆದರು.

ಇದನ್ನೂ ಓದಿ:ಹೊಸ ವರ್ಷಾಚರಣೆ: ಎಂಜಿ ರಸ್ತೆ, ಬ್ರಿಗೇಡ್​​ ರೋಡ್​ನಲ್ಲಿ ಕಳೆಗಟ್ಟಿದ ಸಂಭ್ರಮಾಚರಣೆ

ABOUT THE AUTHOR

...view details