'ಕರೆಂಟ್ ಬಿಲ್ ಕಟ್ಟಂಗಿಲ್ಲ' ಎಂದು ತಮಟೆ ಬಾರಿಸಿದ ವ್ಯಕ್ತಿ: ವಿಡಿಯೋ ವೈರಲ್ - etv bharat news
ದಾವಣಗೆರೆ:ಚುನಾವಣೆ ಸಂದರ್ಭದಲ್ಲಿಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ಕರೆಂಟ್ ಉಚಿತ ಎಂದು ಹೇಳಿದ್ದರು. ಈಗ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ರಚನೆ ಆಗಿದೆ. ಕೆಲವು ಕಡೆ ಜನರು ವಿದ್ಯುತ್ ಶುಲ್ಕ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ವ್ಯಕ್ತಿ ಓರ್ವ ತಮಟೆ ಬಾರಿಸುತ್ತ "ಇವತ್ತಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ" ಎಂದು ಡಂಗುರ ಸಾರಿರುವ ಘಟನೆ ದಾವಣಗೆರೆ ತಾಲೂಕಿನ ಗೋಣಿವಾಡ ಗ್ರಾಮದಲ್ಲಿ ನಡೆದಿದೆ. ಯಾರು ವಿದ್ಯುತ್ ಶುಲ್ಕ ಕಟ್ಟಬೇಡಿ ಎಂದು ತಮಟೆ ಬಾರಿಸುತ್ತ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗೇ ವೈರಲ್ ಆಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೇ ಮೊದಲ ಕ್ಯಾಬಿನೆಟ್ನಲ್ಲೇ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಆದರೆ, ಇದನ್ನೇ ನಂಬಿಕೊಂಡ ಹಲವಾರು ಜನರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:ಕರೆಂಟ್ ಬಿಲ್ ಕಟ್ಬೇಡಿ, ಬಸ್ ಟಿಕೆಟ್ ತಗೋಬೇಡಿ: ಜನರಿಗೆ ಆರ್. ಅಶೋಕ್ ಕರೆ