ಕರ್ನಾಟಕ

karnataka

ಮೋದಿ ಮಹಾಸಂಗಮಕ್ಕೆ ಬೆಣ್ಣೆನಗರಿ ಸಿದ್ಧ: ಹತ್ತು ಲಕ್ಷ ಜನ ಸೇರುವ ಸಾಧ್ಯತೆ

ETV Bharat / videos

ಮೋದಿ ಮಹಾಸಂಗಮಕ್ಕೆ ಬೆಣ್ಣೆನಗರಿ ಸಿದ್ಧ: ಹತ್ತು ಲಕ್ಷ ಜನ ಸೇರುವ ನಿರೀಕ್ಷೆ - ಮಹಾಸಂಗಮ ಸಮಾವೇಶ

By

Published : Mar 23, 2023, 7:39 PM IST

ದಾವಣಗೆರೆ:ಮೋದಿ ಮಹಾಸಂಗಮಕ್ಕೆ ದಾವಣಗೆರೆ ಸಿದ್ಧವಾಗಿದೆ. ರಾಜ್ಯಾದ್ಯಂತ ಆರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ರಥಗಳು ದಾವಣಗೆರೆಯಲ್ಲಿ ಸಂಗಮ ಆಗುವುದರಿಂದ ಈ ಮಹಾಸಂಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇನ್ನು ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಟಕ್ಕರ್ ಕೊಡಲು ಬಿಜೆಪಿಯ ನಾಯಕರು ಪ್ರಧಾನಿ ಮೋದಿಯವರನ್ನು ಮಹಾಸಂಗಮ ಸಮಾವೇಶಕ್ಕೆ ಕರೆಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. 

ಇದೇ 25ಕ್ಕೆ ಮೋದಿ ನೇತೃತ್ವದಲ್ಲಿ ಬೃಹತ್ ಶಕ್ತಿಪ್ರದರ್ಶನ ಮಾಡಲು ಕೇಸರಿ ಪಾಳೆಯ ಸಿದ್ಧತೆ ನಡೆಸಿದೆ. ದಾವಣಗೆರೆ ನಗರದ ಜಿಎಂಐಟಿ ಕಾಲೇಜಿನ ಬಳಿ ಮುನ್ನೂರು ಎಕರೆ ಜಮೀನಿನಲ್ಲಿ ಬೃಹತ್ ಪೆಂಡಲ್ ಹಾಕಲಾಗಿದ್ದು, ನೂರು ಜನ ಆಸೀನರಾಗುವಷ್ಟು ದೊಡ್ಡ ವೇದಿಕೆ ಸಿದ್ಧವಾಗಿದೆ. ಈ ವೇದಿಕೆಯಲ್ಲಿ ರಾಜ್ಯ ಕೇಂದ್ರ ನಾಯಕರು ಮೋದಿಯವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಿಸಲು ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಲಾಗಿದೆ. ಇನ್ನು ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ನಾಲ್ಕು ಜಿಲ್ಲೆಗಳಿಂದ ಹೆಚ್ಚು ಜನರನ್ನು ಕರೆತರುವ ಪ್ರಯತ್ನ ನಡೆದಿದೆ. ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಊಟ ತಿಂಡಿ ವ್ಯವಸ್ಥೆ ಮಾಡಲಾಗಿದೆ. 

ಇದನ್ನೂ ಓದಿ:ಮಾಜಿ ಸಚಿವ ಕೃಷ್ಣ ಬೈರೇಗೌಡರು ತಮಟೆ ಬಾರಿಸಿದ್ರೆ ಹೇಗಿರುತ್ತೆ? ವಿಡಿಯೋ ನೋಡಿ

ABOUT THE AUTHOR

...view details