ಅಮಾವಾಸ್ಯೆ ಎಫೆಕ್ಟ್.. ಗಜಪಡೆ ತಾಲೀಮಿಗೆ ಬ್ರೇಕ್ - Etv Bharat Kannada
ಮೈಸೂರು: ಕ್ಯಾಪ್ಟನ್ ಅಭಿಮನ್ಯು ತಂಡದ ಗಜಪಡೆಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೀಮಿಗೆ ಬ್ರೇಕ್ ನೀಡಲಾಯಿತು. ಅಮಾವಾಸ್ಯೆ ಹಿನ್ನೆಲೆ ಅರಮನೆಯಿಂದ ಆಚೆ ಹೋದರೆ ಅಪಾಯ ಎದುರಾಗಲಿದೆ ಎಂಬ ಮಾವುತರ ಹಾಗೂ ಕಾವಾಡಿಗಳ ನಂಬಿಕೆ ಹಿನ್ನೆಲೆ ಆನೆಗಳ ತಾಲೀಮಿಗೆ ಇಂದು ಬ್ರೇಕ್ ಹಾಕಲಾಯಿತು. ಕಳೆದ ವಾರದಿಂದ ಅಭಿಮನ್ಯು, ಅರ್ಜುನ, ಶ್ರೀರಾಮ, ಚೈತ್ರ, ಕಾವೇರಿ, ಗೋಪಿ, ವಿಕ್ರಂ, ಧನಂಜಯ, ಲಕ್ಷ್ಮೀ ಆನೆಗಳಿಗೆ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ತಾಲೀಮು ಮಾಡಿಸಲಾಗುತ್ತಿದೆ. ಅಮಾವಾಸ್ಯೆ ಹಿನ್ನೆಲೆ ಅಭಿಮನ್ಯು ಹಾಗೂ ಧನಂಜಯ ಆನೆಗಳಿಗೆ ಅರಮನೆಯ ಆವರಣದಲ್ಲಿ ಸ್ನಾನ ಮಾಡಿಸಲಾಯಿತು.
Last Updated : Feb 3, 2023, 8:27 PM IST