ಕರ್ನಾಟಕ

karnataka

ಮೈಸೂರು ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್​​ನಲ್ಲಿ ದಸರಾ ಗಜಪಡೆ : ವಿಡಿಯೋ

ETV Bharat / videos

ಮೈಸೂರು ಅರಣ್ಯ ಭವನದಲ್ಲಿ ರಿಲ್ಯಾಕ್ಸ್ ಮೂಡ್​​ನಲ್ಲಿ ದಸರಾ ಗಜಪಡೆ : ವಿಡಿಯೋ - ನಾಗರಹೊಳೆಯ ವೀರನಹೊಸಳ್ಳಿ

By ETV Bharat Karnataka Team

Published : Sep 2, 2023, 5:42 PM IST

ಮೈಸೂರು :ಗಜಪಯಣದ ಮೂಲಕ ನಗರಕ್ಕೆ ಆಗಮಿಸಿದ ಅಭಿಮನ್ಯು ನೇತೃತ್ವದ 9 ದಸರಾ ಆನೆಗಳು ಇಲ್ಲಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿವೆ. ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಶಿಬಿರಗಳಿಂದ ಬಂದಿಳಿದಿರುವ ಆನೆಗಳು ಪರಸ್ಪರ ಸ್ನೇಹ ಬೆಳೆಸಿಕೊಳ್ಳುತ್ತ ರಿಲ್ಯಾಕ್ಸ್ ಮೂಡ್​​ನಲ್ಲಿ ಕಾಲ ಕಳೆಯುತ್ತಿವೆ. ಸೆಪ್ಟೆಂಬರ್ 1 ರಂದು ನಾಗರಹೊಳೆಯ ವೀರನಹೊಸಳ್ಳಿಯಿಂದ ಆಗಮಿಸಿದ ಗಜಪಡೆ ಮೈಸೂರಿನ ಅರಣ್ಯ ಭವನದಲ್ಲಿ ಸೆಪ್ಟೆಂಬರ್ 5ರವರೆಗೆ ವಾಸ್ತವ್ಯ ಇರಲಿದೆ. ಅಭಿಮನ್ಯು ನೇತೃತ್ವದಲ್ಲಿ ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಗಜಪಡೆಯ ಈ ಹಿಂದಿನ ನಾಯಕ ಅರ್ಜುನ ಮತ್ತು ಹೆಣ್ಣಾನೆಗಳಾದ ವಿಜಯ, ವರಲಕ್ಷ್ಮಿ ಆನೆಗಳಿವೆ. ಈ ಆನೆಗಳ ಜೊತೆಗೆ ಬಂದ ಮಾವುತರು, ಕಾವಾಡಿಗರೂ ಸಹ ಇಲ್ಲಿಯೇ ಉಳಿದುಕೊಂಡಿದ್ದಾರೆ.

9 ಆನೆಗಳು ಮತ್ತಿಗೋಡು, ದುಬಾರೆ, ಬಳ್ಳೆ ಹಾಗೂ ಭೀಮನಕಟ್ಟೆ ಆನೆ ಶಿಬಿರಗಳಿಂದ ಬಂದಿಳಿದಿವೆ. ವಿವಿಧ ಶಿಬಿರಗಳಿಂದ ಬಂದ ಆನೆಗಳನ್ನು ಪರಸ್ಪರ ಪರಿಚಯ ಮಾಡಿಕೊಳ್ಳುವ ದೃಶ್ಯ ಕಂಡುಬಂತು. ಗಜಪಡೆಗೆ ಅವುಗಳ ಮಾವುತರು ಸ್ನಾನ ಮಾಡಿಸಿ, ಪ್ರಯಾಣದ ಆಯಾಸ ಕಡಿಮೆ ಮಾಡಿದರು. ಸೆಪ್ಟೆಂಬರ್ 5ರ ಮಧ್ಯಾಹ್ನ 12:1ರಿಂದ 12:51ರ ನಡುವಿನ ಅಭಿಜಿತ ಲಗ್ನದ ಶುಭ ಮುಹೂರ್ತದಲ್ಲಿ ಅರಮನೆಯ ಮುಂಭಾಗದ ಜಯಮಾರ್ತಾಂಡ ದ್ವಾರದ ಮೂಲಕ ದಸರಾ ಗಜಪಡೆಯು ಅರಮನೆ ಪ್ರವೇಶ ಮಾಡಲಿದೆ.

ABOUT THE AUTHOR

...view details