ಎಸ್ಕಾರ್ಟ್ ರಕ್ಷಣೆಯಲ್ಲಿ ಅರಮನೆಗೆ ಬಂದ ಗಜಪಡೆ: ವಿಡಿಯೋ - ದಸರಾ ಜಂಬೂ ಸವಾರಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಗಜಪಡೆಯ ಎರಡನೇ ತಂಡ ಇಂದು ಅರಮನೆಗೆ ಆಗಮಿಸಿತು. ಐದು ಆನೆಗಳು ಐದು ಲಾರಿಗಳಲ್ಲಿ ಅರಣ್ಯ ಇಲಾಖೆಯ ವಾಹನ ಹಾಗೂ ಪೊಲೀಸ್ ಎಸ್ಕಾರ್ಟ್ನಲ್ಲಿ ಅರಮನೆ ಆವರಣ ಪ್ರವೇಶಿಸಿದವು. ರಾಂಪುರ ಶಿಬಿರದಿಂದ ಪಾರ್ಥ ಸಾರಥಿ (18), ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ವಿಜಯ (63), ಗೋಪಿ (40), ಶ್ರೀರಾಮ (40), ಸುಗ್ರೀವ (40) ದಸರಾದಲ್ಲಿ ಭಾಗವಹಿಸಲಿವೆ. ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ ನಿಧನ ಹಿನ್ನೆಲೆಯಲ್ಲಿ ಯಾವುದೇ ರೀತಿ ಸಾಂಪ್ರದಾಯಿಕ ಸ್ವಾಗತ ಇರಲಿಲ್ಲ.
Last Updated : Feb 3, 2023, 8:27 PM IST