ಕರ್ನಾಟಕ

karnataka

ಉಜ್ಜನಿ ಚೌಡೇಶ್ವರಿ ದೇವಿ ಜಾತ್ರೆ

ETV Bharat / videos

ಉಜ್ಜನಿ ಚೌಡೇಶ್ವರಿ ದೇವಿ ಜಾತ್ರೆ: ಜನಿವಾರ ಧರಿಸಿ ಬ್ರಾಹ್ಮಣ ಸಂಪ್ರದಾಯ ಪಾಲಿಸುವ ದಲಿತರು - ತುಮಕೂರು

By

Published : Mar 27, 2023, 11:45 AM IST

ತುಮಕೂರು:ಜಿಲ್ಲೆಯ ಕುಣಿಗಲ್ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆಯುವ ಚೌಡೇಶ್ವರಿ ಜಾತ್ರೆ ವಿಶೇಷ ಆಚರಣೆಗೆ ಸಾಕ್ಷಿಯಾಗಿದೆ. ಸುಮಾರು 12 ದಿನ ನಡೆಯುವ ಜಾತ್ರೆಯಲ್ಲಿ ದಲಿತರು ಜನಿವಾರ ಧರಿಸುವ ಮೂಲಕ ಬ್ರಾಹ್ಮಣ ಸಮುದಾಯದ ಸಂಪ್ರದಾಯ ಪಾಲನೆ ಮಾಡುವುದು ಇಲ್ಲಿನ ವಿಶೇಷ. 

ಪೌರಾಣಿಕ ಹಿನ್ನೆಲೆ:ಚೌಡೇಶ್ವರಿ ದೇವಿಯ ಭಕ್ತೆ ಬ್ರಾಹ್ಮಣ ಕನ್ಯೆ ಹೆಬ್ಬಾರಮ್ಮ ದಲಿತ ಯುವಕನನ್ನು ಮದುವೆಯಾಗುತ್ತಾಳೆ. ಐವರು ಗಂಡು ಮಕ್ಕಳ ತಾಯಿಯಾದ ನಂತರ ಆಕೆಗೆ ತಾನು ಮದುವೆಯಾಗಿದ್ದು ಬ್ರಾಹ್ಮಣ ವ್ಯಕ್ತಿಯಲ್ಲ, ಆತ ದಲಿತ ಎಂದು ತಿಳಿಯುತ್ತದೆ. ಆಗ ಚೌಡೇಶ್ವರಿ ದೇವಿಯ ಜಾತ್ರೆಯ ಕೊಂಡದಲ್ಲಿ ಅಗ್ನಿ ಪ್ರವೇಶಕ್ಕೆ ನಿರ್ಧರಿಸುತ್ತಾಳೆ. ಹೀಗೆ ತಾನು ಅಗ್ನಿ ಪ್ರವೇಶ ಮಾಡುವ ಮುನ್ನ, ಜನಿವಾರ ಧರಿಸಿ ಚೌಡೇಶ್ವರಿ ದೇವಿಯ ನಿರಂತರ ಸೇವೆ ಮಾಡುವಂತೆ ತನ್ನ ಪತಿ ಹಾಗೂ ಐವರೂ ಮಕ್ಕಳಿಗೆ ಶಾಪ ನೀಡಿದ್ದಳು ಎಂಬುದು ಪ್ರತೀತಿ.

ಅಂದಿನಿಂದ ಗ್ರಾಮದಲ್ಲಿ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. 6 ಜನ ದಲಿತರು ಚೌಡೇಶ್ವರಿ ಜಾತ್ರೆಯ ಸಂದರ್ಭದಲ್ಲಿ ಜನಿವಾರ ಧರಿಸಿ ವ್ರತಾಚರಣೆಯ ಮೂಲಕ ಪೂಜೆ ಸಲ್ಲಿಸುತ್ತಾರೆ. ಜಾತ್ರೆಯ ಕೊನೆದ ದಿನ ಕಲ್ಯಾಣಿಗೆ ಜನಿವಾರ ವಿಸರ್ಜಿಸುವ ಮೂಲಕ ಜಾತ್ರೆ ಕೊನೆಗೊಳ್ಳುತ್ತದೆ. 

ಇದನ್ನೂ ಓದಿ:ಬೀರಲಿಂಗೇಶ್ವರ ಜಾತ್ರೆ : ಖಡ್ಗದಿಂದ ಅಕ್ಕಿ ತುಂಬಿದ ಬಿಂದಿಗೆ ಎತ್ತುವ ಪದ್ದತಿ

ABOUT THE AUTHOR

...view details