ಕರ್ನಾಟಕ

karnataka

ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಪೊಲೀಸ್ ಇನಸ್ಪೆಕ್ಟರ್: ವಿಡಿಯೋ ವೈರಲ್​

ETV Bharat / videos

ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್ ಇನ್ಸ್​​​ಪೆಕ್ಟರ್?​ : ವಿಡಿಯೋ ವೈರಲ್​ - ಉತ್ತರ ಪ್ರದೇಶ ಪೊಲೀಸ್

By

Published : May 30, 2023, 7:04 PM IST

ಬದೌನ್ (ಉತ್ತರ ಪ್ರದೇಶ):'ಉತ್ತರ ಪ್ರದೇಶ ಪೊಲೀಸರು ನಿಮ್ಮ ಸೇವೆಗೆ ಸಿದ್ಧ' ಎಂದು ಯುಪಿಯ ಪ್ರತಿ ಪೊಲೀಸ್ ಠಾಣೆಯ ಹೊರಗೆ ಬರೆದಿರುವ ಈ ಘೋಷಣೆಯನ್ನು ನೀವು ನೋಡಿರಬೇಕು. ಆದರೆ, ಸೇವೆಯ ನಿರೀಕ್ಷೆಯಲ್ಲಿ ಠಾಣೆಗೆ ಬರುವ ಸಂತ್ರಸ್ತರ ಜೊತೆ ಹಲವು ಬಾರಿ ಪೊಲೀಸರು ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರೆನ್ನಲಾದ ವಿಡಿಯೋ ವೈರಲ್​ ಆಗಿದೆ. 

ಇಲ್ಲಿ ಪೊಲೀಸ್ ಠಾಣೆ ಆವರಣದಲ್ಲಿಯೇ ದಲಿತ ಯುವಕನನ್ನು ನಿರ್ದಯವಾಗಿ ಥಳಿಸಲಾಗಿದೆ. ದೂರಿನೊಂದಿಗೆ ಪೊಲೀಸ್ ಠಾಣೆಗೆ ತಲುಪಿದಾಗ ಠಾಣೆಯ ಇನ್ಸ್​ಪೆಕ್ಟರ್​ ಯುವಕನಿಗೆ ಬೆಲ್ಟ್​ನಿಂದ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಘಟನೆಯ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬದೌನ್‌ನ ಸಿಸಯ್ಯ ಗ್ರಾಮದ ವೈರಲ್ ವಿಡಿಯೋವನ್ನು ಹೇಳಲಾಗುತ್ತಿದೆ. ಸಿಸಯ್ಯ ನಿವಾಸಿ ಪಿಂಟು ಜಾತವ್ ಅವರ ಮಗ ನಂದ್ರಾಮ್ ತನ್ನ ಸಹೋದರನೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದಾನೆ. ಅವರು ದೂರು ತೆಗೆದುಕೊಂಡು ಕ್ರಮದ ಭರವಸೆಯಲ್ಲಿ ಪೊಲೀಸ್ ಠಾಣೆಗೆ ತಲುಪಿದ್ದಾನೆ. ಇಲ್ಲಿ ಹಾಫ್ ಪ್ಯಾಂಟ್ ಮತ್ತು ಬನಿಯನ್​ನಲ್ಲಿ ಕುಳಿತಿದ್ದ ಪೊಲೀಸ್​ ಸಿಬ್ಬಂದಿ ಗರಂ ಆಗಿದ್ದ. ಇದಾದ ಬಳಿಕ ಏನನ್ನೂ ಕೇಳದೇ ಕೈಯಲ್ಲಿದ್ದ ಬೆಲ್ಟ್ ತೆಗೆದುಕೊಂಡು ಯವಕನಿಗೆ ಥಳಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಯುವಕನ ಮೇಲೆ ನಿರ್ದಯವಾಗಿ ಹೊಡೆಯುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ವೇಳೆ ಇನ್ಸ್​​ಪೆಕ್ಟರ್​ ಎನ್ನಲಾದ ವ್ಯಕ್ತಿ  ಯುವಕನನ್ನು ನಿಂದಿಸುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ:ಮದುವೆಯಾಗುವ ನೆಪದಲ್ಲಿ ವಾಯುಪಡೆ ಮಹಿಳಾ ಅಧಿಕಾರಿಗೆ 23 ಲಕ್ಷ ರೂ. ಪಂಗನಾಮ..!

ABOUT THE AUTHOR

...view details