ಕರ್ನಾಟಕ

karnataka

ಸಫಾರಿಯಲ್ಲಿ ಆನೆ ದಾಳಿಯಿಂದ ವಿಚಾರವಾದಿ ಭಗವಾನ್, ದಲಿತ ಮುಖಂಡ ಪಾಪು ಗ್ರೇಟ್ ಎಸ್ಕೇಪ್

ETV Bharat / videos

ಸಫಾರಿಯಲ್ಲಿ ಆನೆ ದಾಳಿಯಿಂದ ವಿಚಾರವಾದಿ ಭಗವಾನ್, ದಲಿತ ಮುಖಂಡ ಪಾಪು ಗ್ರೇಟ್ ಎಸ್ಕೇಪ್ - thinker K S bhagwan

By

Published : Jun 3, 2023, 10:55 PM IST

ಚಾಮರಾಜನಗರ:ಚಾಮರಾಜನಗರ ತಾಲೂಕಿನ ಕೆ ಗುಡಿಯಲ್ಲಿ ಸಫಾರಿ ಜೀಪನ್ನು 6 ಆನೆಗಳ ಹಿಂಡು ಅಟ್ಟಾಡಿಸಿದ್ದು ಖ್ಯಾತ ವಿಚಾರವಾದಿ ಕೆ ಎಸ್ ಭಗವಾನ್, ಚಾಮರಾಜನಗರದ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಗುರುವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆ ಗುಡಿಯಲ್ಲಿನ ವನ್ಯಜೀವಿ ಸಫಾರಿಗೆಂದು ವಿಚಾರವಾದಿ ಕೆ ಎಸ್ ಭಗವಾನ್, ದಲಿತ ಮುಖಂಡ ಪಾಪು ಹಾಗೂ ಇನ್ನಿತರರು ತೆರಳಿದ್ದ ವೇಳೆ ಮರಿ ಜೊತೆ ಇದ್ದ ಆನೆ ಹಿಂಡು ದಾಳಿ ಮಾಡಲು ಮುಂದಾಗಿತ್ತು. ಈ ವೇಳೆ ಚಾಲಕ ತನ್ನ ಸಮಯಪ್ರಜ್ಞೆಯಿಂದ ರಿವರ್ಸ್ ಗೇರಲ್ಲಿ ಜೀಪನ್ನು ಚಲಾಯಿಸಿ ಅಪಾಯದಿಂದ ಪಾರು ಮಾಡಿದ್ದಾರೆ. ಮರಿ ಇದ್ದಿದ್ದರಿಂದ ಆನೆ ದಾಳಿ ಮಾಡಲು ಮುಂದಾಯಿತು. ಹಿಂಡಿನಲ್ಲಿ ಒಟ್ಟು 6 ಆನೆಗಳಿದ್ದವು. ಅದೃಷ್ಟವಶಾತ್ ಜೀಪ್ ಕಂದಕಕ್ಕೆ ಬೀಳಲಿಲ್ಲ, ಅದೊಂದು ಭಯಾನಕ ಅನುಭವ ಎಂದು ದಲಿತ ಮುಖಂಡ ಪಾಪು ತಿಳಿಸಿದ್ದಾರೆ.

ಇದನ್ನೂ ಓದಿ :ಬಾಲಸೋರ್​ ರೈಲು ಅಪಘಾತ- ಸಾವಿನ ಸಂಖ್ಯೆ 261ಕ್ಕೆ ಏರಿಕೆ: ಹಳಿಗಳ ಮೇಲೆ ಮರಣ ಮೃದಂಗ, ಸುಮಾರು 50 ಟ್ರೈನ್​ಗಳು ರದ್ದು​! 

ABOUT THE AUTHOR

...view details