ಕರ್ನಾಟಕ

karnataka

ETV Bharat / videos

ಸಿತ್ರಾಂಗ್ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ 20 ಬಾಂಗ್ಲಾದೇಶದ ಮೀನುಗಾರರನ್ನು ರಕ್ಷಿಸಿದ ಭಾರತ - ಭಾರತೀಯ ಕೋಸ್ಟ್ ಗಾರ್ಡ್

By

Published : Oct 27, 2022, 8:15 AM IST

Updated : Feb 3, 2023, 8:30 PM IST

ಒಡಿಶಾದ ಜಗತ್ಸಿಂಗ್ಪುರ ಕರಾವಳಿಯಲ್ಲಿ ಸಿಲುಕಿಕೊಂಡಿದ್ದ 20 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದೆ. ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದ ಬಳಿಕ ಬಾಂಗ್ಲಾದೇಶದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದೆ. ಆದರೆ ಸುಮಾರು 20 ಮೀನುಗಾರರು ಬಚಾವ್​ ಆಗಿದ್ದು, ಫ್ಲೋಟಿಂಗ್ ಬಾರ್ ಮೇಲೆ ಮೀನುಗಾರರನ್ನು ನೋಡಿದ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದ್ದಾರೆ. ಚಂಡಮಾರುತವು ಹಾದುಹೋದ ನಂತರ ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಾಗ ಈ ರಕ್ಷಣೆ ಕಾರ್ಯ ನಡೆದಿದೆ. ಭಾರತೀಯ ಕೋಸ್ಟ್ ಗಾರ್ಡ್‌ನ ಹಡಗಿನ ಸಹಾಯದಿಂದ ಮೀನುಗಾರರನ್ನು ರಕ್ಷಿಸಲಾಯಿತು. ಭಾರತೀಯ ಕೋಸ್ಟ್ ಗಾರ್ಡ್ ಮೀನುಗಾರರನ್ನು ರಕ್ಷಿಸಿದ ನಂತರ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
Last Updated : Feb 3, 2023, 8:30 PM IST

ABOUT THE AUTHOR

...view details