Cyclone Biparjoy: ರಾಜಸ್ಥಾನದಲ್ಲಿ ಬಿಪರ್ಜೋಯ್ ಚಂಡಮಾರುತದಿಂದ ಭಾರಿ ಮಳೆ, ಜನಜೀವನಕ್ಕೆ ಬರೆ- ವಿಡಿಯೋ - ರಾಜಸ್ಥಾನದಲ್ಲಿ ಚಂಡಮಾರುತದ ಪರಿಣಾಮ
ರಾಜಸ್ಥಾನ: ಬಿಪರ್ಜೋಯ್ ಚಂಡಮಾರುತಕ್ಕೆ ರಾಜಸ್ಥಾನ ತತ್ತರಿಸಿದೆ. ರಾಜ್ಯದ ವಿವಿಧೆಡೆ ಭಾರಿ ಮಳೆ ಸುರಿಯುತ್ತಿದೆ. ರಸ್ತೆಗಳು ನೀರಿನಿಂದ ಆವರಿಸಿದ್ದು ವಾಹನ, ಜನ ಸಂಚಾರ ಸ್ಥಗಿತವಾಗಿದೆ. ಮಳೆಯೊಂದಿಗೆ ಬಿರುಸಾದ ಗಾಳಿಯೂ ಬೀಸುತ್ತಿದೆ. ಮರಗಳು ಧರೆಗೆ ಅಪ್ಪಳಿಸಿವೆ. ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.
ರಾಜ್ಯದ ಬಾರ್ಮರ್, ಜಲೋರ್ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿ ಪ್ರವಾಹದಂತಹ ಪರಿಸ್ಥಿತಿ ಕಂಡು ಬರುತ್ತಿದೆ. ಕೆಲವು ಪ್ರದೇಶಗಳಲ್ಲಿ ಕಟ್ಟಡದ ಕೆಳಗೆ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಚಂಡಮಾರುತದ ಪ್ರಭಾವದಿಂದ ಕಛ್ನ ಭುಜ್‌ನಲ್ಲಿ ಹಲವು ಮರಗಳು ನೆಲಕ್ಕುರುಳಿವೆ.
ಮುಂದಿನ 12 ಗಂಟೆಗಳಲ್ಲಿ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಡಾ. ಮೃತ್ಯುಂಜಯ್ ಮಹಾಪಾತ್ರ ಮುನ್ಸೂಚನೆ ನೀಡಿದ್ದಾರೆ. ಜೊತೆಗೆ, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ರಾಜಸ್ಥಾನದ ಸಿಹೋಲ್ನಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಮೊಬೈಲ್ಗಳು ಕೆಲಸ ಮಾಡದೇ ಅಲ್ಲಿನ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಗುಜರಾತಲ್ಲಿ ಅಬ್ಬರಿಸಿ ಬೊಬ್ಬಿರಿದ 'ಬಿಪರ್ಜೋಯ್' ಶಾಂತ... ಚಂಡಮಾರುತ ದುರ್ಬಲ.. ರಾಜಸ್ಥಾನದಲ್ಲಿ ಧಾರಾಕಾರ ಮಳೆ