ದಾವಣಗೆರೆ: ತ್ರಿವರ್ಣ ಧ್ವಜ ಹಿಡಿದು ಸೈಕಲ್ ಜಾಥಾ - ತ್ರಿವರ್ಣ ಧ್ವಜ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಯುವಕ, ಯುವತಿಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ಜನರು ತ್ರಿವರ್ಣ ಧ್ವಜ ಹಿಡಿದು ಸೈಕಲ್ ಜಾಥಾ ನಡೆಸಿದರು. ನಗರದ ಶ್ರೀರಾಮ ಮಂದಿರದಿಂದ ಶುರುವಾದ ಜಾಥಾ ಗುಂಡಿ ವೃತ್ತ, ಚಿಗಟೇರಿ ಆಸ್ಪತ್ರೆ ರಸ್ತೆ, ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತದಲ್ಲಿ ಸಾಗಿತು. ಭಾರತಾಂಬೆಗೆ ಜೈಕಾರ ಮೊಳಗಿಸುತ್ತಾ ಜಾಥಾದಲ್ಲಿ ಪಾಲ್ಗೊಂಡವರು ಸಾಗಿದರು.
Last Updated : Feb 3, 2023, 8:26 PM IST