ವಿಜಯಪುರ: ಕಲ್ಯಾಣ ಮಂಟಪದ ಶೆಡ್‌ನಲ್ಲಿ ಮೊಸಳೆ ಪ್ರತ್ಯಕ್ಷ - Etv Bharat Kannada
ವಿಜಯಪುರ:ಕಲ್ಯಾಣ ಮಂಟಪದ ಶೆಡ್‌ನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದಲ್ಲಿ ನಡೆದಿದೆ. ಮಂಟಪದ ವಸ್ತುಗಳನ್ನಿಡಲು ನಿರ್ಮಿಸಿದ್ದ ಶೆಡ್‌ನಲ್ಲಿ ಪತ್ತೆಯಾಗಿದೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮೊಸಳೆ ರಕ್ಷಿಸಿ ಕೃಷ್ಣಾ ನದಿಗೆ ಬಿಟ್ಟಿದ್ದಾರೆ.
ಶ್ರೀಗಂಧ ಗಿಡ ಕಳ್ಳತನ:ಸರ್ಕಾರಿ ಕಚೇರಿಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧ ಗಿಡಗಳನ್ನು ಕತ್ತರಿಸಿ ಹೊತ್ತೊಯ್ದಿರುವ ಘಟನೆ ಬಸವನಬಾಗೇವಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಕಿಗೆ ಬಂದಿದೆ. ಕಚೇರಿಯ ಆವರಣದಲ್ಲಿ ಬೆಳೆದಿದ್ದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಗಿಡಗಳು ಮಾಯವಾಗಿವೆ. ಬಸವನಬಾಗೇಬಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಾಂಜಾ ಮಾರಾಟಗಾರ ಸೆರೆ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಇಂಡಿ ತಾಲ್ಲೂಕಿನ ಸೋನಕನಹಳ್ಳಿ ಬಳಿ ನಡೆದಿದೆ. ಮುಕ್ತಿಯಾರ್ ಅಹ್ಮದ್ ಕೂಡ್ಲೆ, ಸದ್ದಾಂ ಮುಲ್ಲಾ ಬಂಧಿತರು. ಇವರಿಂದ 5 ಲಕ್ಷ ರೂ ಮೌಲ್ಯದ 70 ಕೆಜಿ ಗಾಂಜಾ ಹಾಗೂ 5 ಲಕ್ಷ ಮೌಲ್ಯದ ಒಂದು ಕಾರು ಜಪ್ತಿ ಮಾಡಲಾಗಿದೆ. ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮನೆಯ ದೇವರ ಕೋಣೆಗೆ ನುಗ್ಗಿದ ಕಾಳಿಂಗ ಸರ್ಪ : ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಜೋಯ್