ಗಂಗಾವತಿಯ ವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ: ಸುರಕ್ಷಿತ ತಾಣಕ್ಕೆ ರವಾನೆ - crocodile found in gangavati
Published : Dec 7, 2023, 7:49 AM IST
|Updated : Dec 7, 2023, 9:21 AM IST
ಗಂಗಾವತಿ: ಜನ ವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಮೀಪ ಮೊಸಳೆಯೊಂದು ಕಂಡು ಬಂದಿದ್ದು, ಕೆಲಕಾಲ ವಸತಿ ಪ್ರದೇಶದ ಜನರಲ್ಲಿ ಆತಂಕ ನಿರ್ಮಾಣವಾದ ಘಟನೆ ಇಲ್ಲಿನ ಜಯನಗರದಲ್ಲಿ ನಡೆದಿದೆ.
ಬಡಾವಣೆಯ ಮೂರನೇ ಹಂತದಲ್ಲಿರುವ ಸಾಲಿಮಠ ಎಂಬುವವರ ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ನಿವಾಸದ ಬಳಿಯ ಮರಳಿನ ದಿಬ್ಬದ ಹತ್ತಿರ ಮೊಸಳೆ ಪ್ರತ್ಯಕ್ಷವಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ಪ್ರೇಮಿ ಹಾಗೂ ಉರಗ ತಜ್ಞ ಸಿರಿಗೇರಿ ರಾಘವೇಂದ್ರ, ಮೊಸಳೆಯನ್ನು ಹಿಡಿದು ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇಲಾಖೆ ಸಿಬ್ಬಂದಿ ಮೊಸಳೆಯನ್ನು ತುಂಗಭದ್ರಾ ನದಿಯ ಸುರಕ್ಷಿತ ತಾಣಕ್ಕೆ ಬಿಟ್ಟು ಬಂದಿದ್ದಾರೆ.
ಸುಮಾರು ನಾಲ್ಕು ಅಡಿ ಉದ್ದ ಇರುವ ಮೊಸಳೆ, ಎಂಟು ಕೆಜಿ ಭಾರವಿದ್ದು, ಸಂಪೂರ್ಣ ಆರೋಗ್ಯಯುತವಾಗಿತ್ತು ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ. ಜನ ವಸತಿ ಪ್ರದೇಶದ ಸುತ್ತಲೂ ಯಾವುದೇ ನೀರಿನ ಮೂಲಗಳಿಲ್ಲ. ಆದಾಗ್ಯೂ ಮೊಸಳೆ ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ವಿದ್ಯುತ್ ತಂತಿ ಬೇಲಿ ತಗುಲಿ ಆನೆ ಸಾವು: ಹೂತು ಹಾಕಿದ ಮೂವರ ವಿರುದ್ಧ ಪ್ರಕರಣ ದಾಖಲು