ಕರ್ನಾಟಕ

karnataka

ಬೈಕ್​ನಲ್ಲಿರಿಸಿದ್ದ ಹಣವನ್ನು ಎಗರಿಸಿ ಪರಾರಿಯಾದ ಕಳ್ಳರು - ವಿಡಿಯೋ

ETV Bharat / videos

Kolar crime news.. ಬೈಕ್​ನಲ್ಲಿರಿಸಿದ್ದ ಹಣ ಎಗರಿಸಿ ಪರಾರಿಯಾದ ಖದೀಮರು - ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ಬೈಕ್​ನಲ್ಲಿರಿಸಿದ್ದ ಹಣ ಎಗರಿಸಿ ಪರಾರಿಯಾದ ಖದೀಮರು

By

Published : Jun 10, 2023, 3:47 PM IST

ಕೋಲಾರ : ದ್ವಿಚಕ್ರ ವಾಹನದಲ್ಲಿ ಇರಿಸಿದ್ದ ಒಂದೂವರೆ ಲಕ್ಷ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ವೇಣು ಶಾಲೆಯ ವೃತ್ತದಲ್ಲಿ ನಡೆದಿದೆ. ಚಿರುವನಹಳ್ಳಿ ಗ್ರಾಮದ ಕೃಷ್ಣಾರೆಡ್ಡಿ ಎಂಬುವರು ಕಾರು ಖರೀದಿಸುವ ಸಲುವಾಗಿ ಬ್ಯಾಂಕ್​ನಿಂದ ತಂದು ಬೈಕ್​ನಲ್ಲಿ ಇರಿಸಿದ್ದ ಹಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೈ ಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಖರೀದಿಸುವ ಸಲುವಾಗಿ ಕೃಷ್ಣಾರೆಡ್ಡಿ ಅವರ ಮಕ್ಕಳು ಇವರ ಬ್ಯಾಂಕ್ ಖಾತೆಗೆ​​ ಹಣವನ್ನು ಹಾಕಿದ್ದರು. ಕೃಷ್ಣಾ ರೆಡ್ಡಿ ಅವರು ಈ ಹಣವನ್ನು ಶ್ರೀನಿವಾಸಪುರ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್​ನಿಂದ ಡ್ರಾ ಮಾಡಿ ತಂದು, ತಮ್ಮ ಬೈಕ್​ನ ಎದುರಿನ ಚೀಲದಲ್ಲಿ ಇರಿಸಿದ್ದರು. ಬಳಿಕ ಮನೆಗೆ ಹಿಂತಿರುಗುವಾಗ ಇಲ್ಲಿರುವ ಬೇಕರಿಯೊಂದಕ್ಕೆ ತೆರಳಿದ್ದಾರೆ. ಈ ವೇಳೆ ಬ್ಯಾಂಕ್​ನಿಂದಲೇ ಕೃಷ್ಣಾ ರೆಡ್ಡಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಚಾಲಾಕಿ ಕಳ್ಳರು ಕೃಷ್ಣಾರೆಡ್ಡಿ ಅವರು ತಿಂಡಿ ತೆಗೆದುಕೊಳ್ಳಲು ಬೇಕರಿ ಮುಂದೆ ಬೈಕ್​ ನಿಲ್ಲಿಸಿ ಹೋದಾಗ ಬೈಕಿನಲ್ಲಿದ್ದ ಒಂದೂವರೆ ಲಕ್ಷ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಚಾಮರಾಜನಗರ ಗಡಿಯಲ್ಲಿ ಮರಿ ಆನೆ ಅಟ್ಯಾಕ್...ಸವಾರ ಜಸ್ಟ್ ಮಿಸ್, ಬೈಕ್ ಪೀಸ್-ಪೀಸ್

For All Latest Updates

ABOUT THE AUTHOR

...view details