watch.. ವಿಮಾನದ ಎರಡು ಇಂಧನ ಟ್ಯಾಂಕ್‌ಗಳು ಗದ್ದೆಯಲ್ಲಿ ಪತ್ತೆ.. ಕ್ಷಿಪಣಿ ಎಂದು ಭಾವಿಸಿದ್ದ ಗ್ರಾಮಸ್ಥರು!
ಸಂತಕಬೀರ್ನಗರ(ಉತ್ತರ ಪ್ರದೇಶ) : ಜಿಲ್ಲೆಯಲ್ಲಿ ಸೋಮವಾರ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರಿ ಸ್ಫೋಟದೊಂದಿಗೆ ವಿಮಾನದ ಎರಡು ಇಂಧನ ಟ್ಯಾಂಕ್‌ಗಳು ಗದ್ದೆಯಲ್ಲಿ ಬಿದ್ದಿವೆ. ಈ ವೇಳೆ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು ಕುತೂಹಲದಿಂದ ಇಂಧನ ಟ್ಯಾಂಕ್ ಬಳಿಗೆ ಧಾವಿಸಿದ್ದಾರೆ. ಈ ವೇಳೆ, ಜನರ ನಡುವೆ ನೂಕುನುಗ್ಗಲು ಉಂಟಾಗಿದೆ. ಎರಡೂ ಇಂಧನ ಟ್ಯಾಂಕ್‌ಗಳನ್ನು ಕಂಡ ರೈತರು ದೀರ್ಘಾವಧಿಯವರೆಗೆ ಅವುಗಳನ್ನು ಕ್ಷಿಪಣಿಗಳೆಂದು ತಪ್ಪಾಗಿ ಅರ್ಥೈಸಿದ್ದಾರೆ. ನಂತರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ಸೀಲ್ ಮಾಡಿದ್ದಾರೆ. ಈ ಬಗ್ಗೆ ಭಾರತೀಯ ವಾಯುಪಡೆಗೂ ಮಾಹಿತಿ ನೀಡಿದ್ದಾರೆ.
ರೈತರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು : ಪ್ರಕರಣವು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿಂಖಾಲ್ ಗ್ರಾಮಕ್ಕೆ ಸಂಬಂಧಿಸಿದೆ. ಸೋಮವಾರ ಮಧ್ಯಾಹ್ನ ರೈತರು ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ, ವಿಮಾನದ ಎರಡು ಇಂಧನ ಟ್ಯಾಂಕ್‌ಗಳು ಭಾರೀ ಸ್ಫೋಟದೊಂದಿಗೆ ನೆಲಕ್ಕೆ ಬಿದ್ದಿವೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ನಂತರ ಗ್ರಾಮಸ್ಥರು ಇಂಧನ ಟ್ಯಾಂಕ್ ಅನ್ನು ಅರ್ಧ ಘಂಟೆಯವರೆಗೆ ಪರಿಶೀಲಿಸಿ ಅದನ್ನು ಕ್ಷಿಪಣಿ ಎಂದು ತಪ್ಪಾಗಿ ಗ್ರಹಿಸಿದ್ದಾರೆ.
ಅಲ್ಲದೇ, ಯಾರಿಗೂ ಹತ್ತಿರ ಹೋಗಲು ಧೈರ್ಯ ಬರದೇ ದೂರದಿಂದಲೇ ಗಮನಿಸಿದ್ದಾರೆ. ತದನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಎಸ್ಪಿ ಸತ್ಯಜಿತ್ ಗುಪ್ತಾ ತಂಡದೊಂದಿಗೆ ಸ್ಥಳಕ್ಕೆ ತಲುಪಿದ್ದಾರೆ. ಇದಾದ ಬಳಿಕ ಇಂಧನ ಟ್ಯಾಂಕ್ ನೋಡಲು ಜನಸಾಗರವೇ ಅಲ್ಲಿ ನೆರೆದಿತ್ತು. ಈ ಹಿನ್ನೆಲೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಇಂಧನ ಟ್ಯಾಂಕ್ ಬಿದ್ದ ಜಾಗವನ್ನು ಸೀಲ್ ಮಾಡಿದ್ದಾರೆ. ಇದಾದನಂತರ ಪೊಲೀಸರು ಭಾರತೀಯ ವಾಯುಪಡೆಗೂ ವಿಷಯ ತಿಳಿಸಿದ್ದಾರೆ. ಏರ್‌ಫೋರ್ಸ್ ತಂಡ ಸ್ಥಳಕ್ಕೆ ತಲುಪಲಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.