ಬಾರ್ ಕ್ಯಾಶಿಯರ್ಗೆ ಚಾಕು ಇರಿದ ದುಷ್ಕರ್ಮಿಗಳು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ - ಬಾರ್ ಕ್ಯಾಷಿಯರ್ಗೆ ಚಾಕು ಇರಿದ ದುಷ್ಕರ್ಮಿಗಳು
Published : Sep 1, 2023, 2:23 PM IST
ಬೆಂಗಳೂರು: ಮದ್ಯ ಸೇವನೆಗೆ ಸಾಲ ಕೊಡಲಿಲ್ಲ ಎಂದು ಕಿರಿಕ್ ತೆಗೆದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರು ಬಳಿಯ ಎಂಬಿಆರ್ ಬಾರ್ನಲ್ಲಿ ಆ.28ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ವಾಗತ್ ಗೌಡ ಹಲ್ಲೆಗೊಳಗಾದ ಬಾರ್ ಕ್ಯಾಶಿಯರ್.
ಪುನೀತ್ ಹಾಗೂ ಆತನ ಸಹಚರರು ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.28ರ ರಾತ್ರಿ ಎಂದಿನಂತೆ ಬಾರ್ ಕ್ಲೋಸ್ ಮಾಡುವಾಗ ಬೈಕಿನಲ್ಲಿ ಮೂವರು ಆರೋಪಿಗಳು ಬಂದಿದ್ದಾರೆ. ಕ್ಲೋಸ್ ಮಾಡುತ್ತಿದ್ದ ಬಾರ್ನ್ನು ತೆಗೆದು ಮದ್ಯ ನೀಡುವಂತೆ ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ಸ್ವಾಗತ್ ಗೌಡ ಮೇಲೆ ಹರಿಹಾಯ್ದಿದ್ದಾರೆ. ಗಾಂಜಾ ನಶೆಯಲ್ಲಿದ್ದ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಕ್ಯಾಶಿಯರ್ ಹೊಟ್ಟೆಗೆ ಇರಿದಿದ್ದಾರೆ. ಇದರಿಂದ ರಕ್ತಸ್ರಾವವಾಗಿ ಸ್ವಾಗತ್ ಕುಸಿದು ಬಿದ್ದಿದ್ದಾರೆ. ಆತನನ್ನು ಕಂಡು ಆರೋಪಿಗಳು ಪರಾರಿ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ