ವಿದೇಶಿ ಪ್ರಜೆಯ ಬ್ಯಾಗ್‌ನಲ್ಲಿತ್ತು 12 ಕೋಟಿ ರೂಪಾಯಿ ಮೌಲ್ಯದ ಕೊಕೇನ್! ಹೇಗೆ ಬಚ್ಚಿಟ್ಟಿದ್ದ ನೋಡಿ - Mumbai Airport
ಮುಂಬೈ : ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿದೇಶಿ ಪ್ರಜೆಯಿಂದ ಅಂದಾಜು 12.98 ಕೋಟಿ ರೂಪಾಯಿ ಮೌಲ್ಯದ 1.3 ಕೆ.ಜಿ ಮಾದಕ ದ್ರವ್ಯ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಜುಲೈ 1ರಂದು ನಿಲ್ದಾಣಕ್ಕೆ ಬಂದಿಳಿದ ವಿದೇಶಿ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಆತನ ಡಫಲ್ ಬ್ಯಾಗ್ ಪರಿಶೀಲಿಸಿದ್ದು, ಕೊಕೇನ್ ಪತ್ತೆಯಾಗಿದೆ. ಕೂಡಲೇ ಆತನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಹಾಗೆಯೇ, ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಕಸ್ಟಮ್ಸ್ ಅಧಿಕಾರಿಗಳು 16.5 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ಉಜ್ಬೇಕಿಸ್ತಾನ ಪ್ರಜೆಗಳನ್ನು ಕಳೆದ ಜೂನ್ 14ರಂದು ಬಂಧಿಸಿದ್ದರು. ವಶಕ್ಕೆ ಪಡೆದ ಚಿನ್ನದ ಮಾರುಕಟ್ಟೆ ಮೌಲ್ಯ 10,39,50,00 ರೂ. (10.39 ಕೋಟಿ) ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.