ಕುಡಿದ ಅಮಲಿನಲ್ಲಿ ಮಗು ಎಸೆದಿದ್ದ ದಂಪತಿ: ತಂದೆ - ತಾಯಿ ವಿರುದ್ದ ಪ್ರಕರಣ ದಾಖಲು - ಈಟಿವಿ ಭಾರತ್ ಕನ್ನಡ ನ್ಯೂಸ್
ಕೊಲ್ಲಂ (ಕೇರಳ) : ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತು ಇದೀಗ ನಿಜವಾಗಿದೆ. ಕುಡಿದ ಅಮಲಿನಲ್ಲಿ ಜನ್ಮ ಕೊಟ್ಟ ತಂದೆಯೇ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಎಸೆದಿರುವ ಘಟನೆ ಕೊಲ್ಲಂ ಜಿಲ್ಲೆಯ ಚಿನ್ನಕಡ ಕುರ್ಕನಪಾಲಂನಲ್ಲಿ ನಡೆದಿದೆ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿರುವ ಮಗು ತಿರುವನಂತಪುರದ ಎಸ್‌ಎಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಮತ್ತೊಂದೆಡೆ ಕೊಲ್ಲಂ ಪೂರ್ವ ಪೊಲೀಸರು ಆರೋಪಿ ದಂಪತಿಗಳನ್ನು ಬಂಧಿಸಿದ್ದಾರೆ. ನಿನ್ನೆ ಭಾನುವಾರ ರಾತ್ರಿ 8 ಗಂಟೆಗೆ ದಂಪತಿ ಮನೆಯೊಳಗೆ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ, ಕುಲಕ್ಷ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಮನೆಯಲ್ಲಿ ಇದ್ದ ಮಗುವನ್ನು ತಂದೆ ಹೊರಗೆ ಎಸೆದಿದ್ದಾನೆ. ಬಿದ್ದ ರಭಸಕ್ಕೆ ಮಗುವಿನ ತಲೆಗೆ ಪೆಟ್ಟಾಗಿದ್ದು, ಅಲ್ಲಿಯೇ ಇದ್ದ ಸ್ಥಳೀಯರು ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲನ್ಯಾಯ ಕಾಯ್ದೆಯಡಿ ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಮಗುವಿನ ಮೂಗು ಕಪ್ಪಾಗಿದ್ದಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು.. ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು!