ಕರ್ನಾಟಕ

karnataka

ಕಾರ್ಖಾನೆಯಲ್ಲಿ ಕಾಪರ್ ಬಾಕ್ಸ್ ಕಳವು

ETV Bharat / videos

ಕಾರ್ಖಾನೆಯಲ್ಲಿ 4 ಲಕ್ಷ ಮೌಲ್ಯದ ಕಾಪರ್ ಬಾಕ್ಸ್ ಕಳವು, ಸಿಸಿಟಿವಿಯಲ್ಲಿ ಸೆರೆ - ಪೊಲೀಸ್ ಠಾಣೆಯಲ್ಲಿ ಪ್ರಕರಣ

By

Published : Feb 12, 2023, 8:26 PM IST

Updated : Feb 14, 2023, 11:34 AM IST

ದೊಡ್ಡಬಳ್ಳಾಪುರ: ಕಾರ್ಖಾನೆಗೆ ನುಗ್ಗಿದ ಕಳ್ಳರು ಸುಮಾರು 4 ಲಕ್ಷ ಮೌಲ್ಯದ ಕಾಪರ್ ಬಾಕ್ಸ್​​ಗಳನ್ನು ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದ ಆದಿತ್ಯಾ ಆಟೊ ಪ್ರಾಡಕ್ಟ್ ಆಂಡ್ ಎಂಜಿನಿಯರಿಂಗ್ ಪ್ರೆವೇಟ್ ಲಿಮಿಟೆಟ್ ಕಾರ್ಖಾನೆಯಲ್ಲಿ ನಡೆದಿದೆ. ಈ ಕಳ್ಳತನದ ಕೃತ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು  ಬಂಧಿಸಿದ್ದು, ಇನ್ನುಳಿದವರ ಪತ್ತೆಗೆ ಜಾಲ ಬೀಸಿದ್ದಾರೆ.

ಫೆಬ್ರವರಿ 6ರಂದು ಮಧ್ಯರಾತ್ರಿ ಫ್ಯಾಕ್ಟರಿಯೊಳಗೆ 8 ಮಂದಿ ಕಳ್ಳರು ಒಳನುಗ್ಗಿ ಅಂದಾಜು 18 ರಿಂದ 20 ಕಾಪರ್ ಬಾಕ್ಸ್ ಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನದ ಕೃತ್ಯಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಜೆಡಿಎಸ್ ಮುಖಂಡನೆಂದು ಹೇಳಿ ವಂಚಿಸಿದ ಆರೋಪ: ಮನೆಗೆ ನುಗ್ಗಿ ಧರ್ಮದೇಟು ಕೊಟ್ಟ ಮಹಿಳೆ

Last Updated : Feb 14, 2023, 11:34 AM IST

ABOUT THE AUTHOR

...view details