ಬೈಕ್ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕಂಟೇನರ್ ಲಾರಿ ಪಲ್ಟಿ: ಭೀಕರ ಅಪಘಾತದ ವಿಡಿಯೋ
ಆದಿಲಾಬಾದ್ (ತೆಲಂಗಾಣ):ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಾವಳ - ಗುಡಿಹತ್ನೂರು ಮಂಡಲಗಳ ನಡುವಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಂಟೇನರ್ ಲಾರಿಯೊಂದು ಪಲ್ಟಿಯಾಗಿದೆ. ರಾಜಸ್ಥಾನದಿಂದ ಹೈದರಾಬಾದ್ ಕಡೆಗೆ ಹೊರಟಿದ್ದ ಲಾರಿ ಚಾಲಕ ವಾಘಪುರ ಕ್ರಾಸ್ ಬಳಿ ದ್ವಿಚಕ್ರ ವಾಹನವನ್ನು ತಪ್ಪಿಸುವ ಯತ್ನದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆಸಿದ್ದು, ಉರುಳಿ ಬಿದ್ದಿದೆ. ಘಟನೆಯಲ್ಲಿ ಬೈಕ್ ಸವಾರ ಹಾಗೂ ಲಾರಿ ಚಾಲಕನಿಗೆ ಗಾಯಗಳಾಗಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಲ್ಲಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯಲ್ಲಿಯೇ ಲಾರಿ ಪಲ್ಟಿ ಆಗಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಲಾರಿಯನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:ಹೊಸಕೋಟೆ: ಬೈಕ್ಗಳಿಗೆ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ ಕಾರು.. ಸಿಸಿಟಿವಿ ವಿಡಿಯೋ
ಟೋಲ್ಗೇಟ್ನಲ್ಲಿ ಅಪಘಾತ:ಟೋಲ್ ಗೇಟ್ನಲ್ಲಿ ವೇಗವಾಗಿ ಬಂದ ಟ್ರಕ್ ಡಿಕ್ಕಿಯಾದ ಪರಿಣಾಮ ನೌಕರನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಇತ್ತೀಚೆಗೆ ತಮಿಳುನಾಡಿನ ಮಧುರೈನ ಮಸ್ತಾನಪಟ್ಟಿ ಎಂಬಲ್ಲಿ ಸಂಭವಿಸಿತ್ತು. ಪೊಲೀಸರ ಮಾಹಿತಿ ಪ್ರಕಾರ, ಬ್ರೇಕ್ ವೈಫಲ್ಯದಿಂದ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡಿತ್ತು. ಟೋಲ್ ಗೇಟ್ನಲ್ಲಿದ್ದ ನೌಕರ ಟ್ರಕ್ ನಿಲ್ಲಿಸಲು ಯತ್ನಿಸಿದ್ದು, ಆದರೆ ಆತನಿಗೆ ಡಿಕ್ಕಿ ಹೊಡೆದ ಟ್ರಕ್ ಕೆಲ ದೂರದವರೆಗೆ ಎಳೆದೊಯ್ದಿತ್ತು.