ಬೆಂಗಳೂರು-ಮೈಸೂರು ಹೈವೇಯಲ್ಲಿ ಪಕ್ಕದ ರಸ್ತೆಗೆ ಜಿಗಿದ ಬೃಹತ್ ಕಂಟೇನರ್ ಲಾರಿ! ಭಯಾನಕ ದೃಶ್ಯ - ಸಾಗುತ್ತಿದ್ದ ದಾರಿಯಿಂದ ಪಕ್ಕದ ರಸ್ತೆಗೆ ಜಿಗಿದ ಕಂಟೇನರ್
ರಾಮನಗರ: ನೂತನವಾಗಿ ನಿರ್ಮಾಣಗೊಂಡಿರುವ ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಏಕಾಏಕಿ ಬೃಹತ್ ಕಂಟೇನರ್ ಲಾರಿಯೊಂದು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಜಿಗಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ಸಂಕಲಗೆರೆ ಗೇಟ್ ಬಳಿ ನಡೆದಿದೆ. ಮೈ ಜುಮ್ಮೆನ್ನಿಸುವ ದೃಶ್ಯ ಸಮೀಪದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.
ವಿಡಿಯೋ ವಿವರ: ಹೈವೇಯ ಎರಡೂ ಬದಿಯಲ್ಲೂ ವಾಹನಗಳ ಸಾಗುತ್ತಿದ್ದು, ಕಂಟೇನರ್ ಲಾರಿಯೊಂದು ದಿಢೀರ್ ತನ್ನ ಹಾದಿ ಬಿಟ್ಟು ವಿರುದ್ಧ ದಿಕ್ಕಿಗೆ ಸಾಗುವ ರಸ್ತೆಗೆ ಜಿಗಿದಿದೆ. ಆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳು ಕೂದಲ ಎಳೆಯ ಅಂತರದಲ್ಲಿ ಪಾರಾಗಿವೆ. ಅಲ್ಲೇ ಇದ್ದ ಇತರ ವಾಹನ ಸವಾರರು ಹಾಗೂ ಸ್ಥಳೀಯರು ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ:Watch video: ಎರಡು ಬೈಕ್ಗಳ ನಡುವೆ ಭೀಕರ ರಸ್ತೆ ಅಪಘಾತ; ಬೈಕ್ ಸವಾರರು ಪಾರಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ