ಅಪ್ಪು ಸ್ಮಾರಕ ನಿರ್ಮಿಸಿದ ತಳಗೆರೆ ಗ್ರಾಮಸ್ಥರು - Puneeth rajkumar Memorial
ಶಿವಮೊಗ್ಗ: ದಿ.ಪುನೀತ್ ರಾಜ್ಕುಮಾರ್ ನೆನಪಿಗಾಗಿ ಸಾಗರ ತಾಲೂಕಿನ ತಳಗೆರೆ ಗ್ರಾಮಸ್ಥರು ಸೇರಿಕೊಂಡು ಸ್ಮಾರಕ ನಿರ್ಮಿಸಿದ್ದಾರೆ. ಪುನೀತ್ ಅವರ ಭಾವಚಿತ್ರ, ಅದರ ಮುಂದೆ ನೀರಿನ ಕಾರಂಜಿ ನಿರ್ಮಿಸಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ಯೋಚಿಸಿ ನಿರ್ಮಿಸಿರುವ ಸ್ಮಾರಕವನ್ನು ಗ್ರಾಮದ ಹಿರಿಯರು ಶನಿವಾರದಂದು ಉದ್ಘಾಟಿಸಿದರು. ನಂತರ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
Last Updated : Feb 3, 2023, 8:24 PM IST