ಕರ್ನಾಟಕ

karnataka

ಕೇರಳ ಬಟೆಜ್​ ವಿರೋಧಿಸಿ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ

ETV Bharat / videos

Watch... ಕೇರಳ ಬಟೆಜ್​ ವಿರೋಧಿಸಿ ಕಾಂಗ್ರೆಸ್​ ಕಾರ್ಯಕರ್ತರಿಂದ ಕೊಚ್ಚಿಯಲ್ಲಿ ಪ್ರತಿಭಟನೆ - etv bharat kannada

By

Published : Feb 7, 2023, 2:41 PM IST

Updated : Feb 14, 2023, 11:34 AM IST

ಕೊಚ್ಚಿ:ಕೇರಳ ಸರ್ಕಾರ ಮಂಡಿಸಿರುವ ಬಜೆಟ್​ ವಿರೋಧಿಸಿ ಕಾಂಗ್ರೆಸ್​ ಕಾರ್ಯಕರ್ತರು ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸಿದರು. ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.  

ಕೇರಳ ಬಜೆಟ್​ 2023-24 ಅನ್ನು ರಾಜ್ಯ ಹಣಕಾಸು ಸಚಿವ ​ಕೆಎನ್ ಬಾಲಗೋಪಾಲ್ ಫೆಬ್ರವರಿ 3 ರಂದು ಮಂಡಿಸಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸರ್ಕಾರವು ಬಜೆಟ್​​ನಲ್ಲಿ ಇಂಧನ, ಮದ್ಯ ಹಾಗೂ ಇನ್ನಿತರ ಕೆಲ ವಸ್ತುಗಳ ಮೇಲೆ ಸಾಮಾಜಿಕ ಭದ್ರತೆ ಸೆಸ್​ ವಿಧಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಸೆಸ್​ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂಪಾಯಿ ಹೆಚ್ಚಳವಾಗಲಿದೆ. ಇನ್ನು ಮದ್ಯದ ಬೆಲೆಯಲ್ಲೂ ಭಾರಿ ಏರಿಕೆ ಆಗಲಿದೆ.  ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಇದನ್ನೂ ಓದಿ:ತಿಂಥಣಿ: ಕೈಲಾಸ ಕಟ್ಟೆಯಲ್ಲಿ ಕುಳಿತು ಗಾಂಜಾ ಸೇದಿದ ಸಾಧುಗಳು

Last Updated : Feb 14, 2023, 11:34 AM IST

ABOUT THE AUTHOR

...view details