ಕರ್ನಾಟಕ

karnataka

ಗೆಲುವಿನ ಸಂಭ್ರಮದಲ್ಲಿ ಕಾಂಗ್ರೆಸ್​​

ETV Bharat / videos

ಗೆಲುವಿನ ಸಂಭ್ರಮದಲ್ಲಿ ಕಾಂಗ್ರೆಸ್​​: ಎಲ್ಲೆಡೆ ಪಟಾಕಿ ಹಚ್ಚಿ ಕಾರ್ಯಕರ್ತರ ಖುಷಿ - ಕರ್ನಾಟಕ ಕುರುಕ್ಷೇತ್ರ 2023

By

Published : May 13, 2023, 12:25 PM IST

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯ ಮಹಾತೀರ್ಪು ಪ್ರಕಟವಾಗುತ್ತಿದ್ದು, ನಿಚ್ಚಳ ಬಹುಮತದತ್ತ ಕಾಂಗ್ರೆಸ್​ ಪಕ್ಷ ಸನಿಹವಾಗುತ್ತಿದೆ. ಪಕ್ಷದ ನಾಯಕರು ಗೆಲುವು ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪಟಾಕಿ ಹಚ್ಚಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಕಾಂಗ್ರೆಸ್​ ಈವರೆಗೂ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, 16 ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಇದು ಕಾರ್ಯಕರ್ತರ ಉತ್ಸಾಹಕ್ಕೆ ಕಾರಣವಾಗಿದೆ.

ನವದೆಹಲಿಯಲ್ಲಿ ಈಗಾಗಲೇ ಕಾಂಗ್ರೆಸ್​ ಗೆಲುವಿನ ಸಂಭ್ರಮ ನಡೆಸಿದೆ. ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಚೇರಿಯ ಮುಂದೆ ಜಮಾಯಿಸಿರುವ ಕಾರ್ಯಕರ್ತರು ಜಯಘೋಷಗಳ ಜೊತೆಗೆ ನರ್ತಿಸುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷ ಗೆಲುವಿನ ಮನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ "ವಿನ್ನಿಂಗ್​" ಸಿಂಬಲ್​ ತೋರಿಸಿ ಸಂಭ್ರಮಾಚರಿಸಿದ್ದಾರೆ.

ಆಡಳಿತಾರೂಢ ಬಿಜೆಪಿ 64 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಹೊಂದಿದೆ. 5 ಕ್ಷೇತ್ರಗಳಲ್ಲಿ ಈವರೆಗೂ ಗೆದ್ದಿದೆ. ಜೆಡಿಎಸ್​ 25 ಸ್ಥಾನಗಳಲ್ಲಿ ಮುಂದಿದ್ದರೆ, ಓರ್ವ ಅಭ್ಯರ್ಥಿ ಮಾತ್ರ ಗೆಲುವು ಕಂಡಿದ್ದಾರೆ. ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು 113 ಮ್ಯಾಜಿಕ್​ ನಂಬರ್ ಬೇಕಿದೆ.

ಓದಿ:ಬಿಜೆಪಿಗೆ ಮುಳುವಾದ ಹಿರಿಯರಿಗೆ ಕೊಕ್ ನೀಡಿ, ಹೊಸಬರಿಗೆ ಮಣೆ ಹಾಕಿದ ಹೊಸ ಪ್ರಯೋಗ!

ABOUT THE AUTHOR

...view details