ಸಿದ್ದರಾಮಯ್ಯ ನಿವಾಸದ ಮುಂದೆ ಸಂಗೀತ ವಾದ್ಯ; ಬೆಂಬಲಿಗರಿಗೆ ನಮಸ್ಕರಿಸಿದ ಡಿಕೆಶಿ- ವಿಡಿಯೋ - ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿಯೋಜಿತ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಇಬ್ಬರೂ ನಾಯಕರ ಮನೆಗಳ ಮುಂದೆ ಬೆಂಬಲಿಗರು ಜಮಾಯಿಸುತ್ತಿದ್ದಾರೆ. ಬೆಂಗಳೂರಿನ ಕುಮಾರಕೃಪಾದಲ್ಲಿರುವ ಸಿದ್ದರಾಮಯ್ಯ ನಿವಾಸದ ಹೊರಭಾಗದಲ್ಲಿ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಅಭಿಮಾನಿಗಳು ನುಡಿಸುತ್ತಿರುವುದು ಕಂಡುಬಂತು. ಇನ್ನೊಂದೆಡೆ, ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿದ್ದು ಹೂಗುಚ್ಛಗಳನ್ನು ಹಿಡಿದು ನಿಂತಿದ್ದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, "ಮೊದಲು ನಾವು ಜನರಿಗೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಬೇಕು. ಸಚಿವ ಸಂಪುಟ ವಿಸ್ತರಣೆ ಕುರಿತು ಸುಳ್ಳು ಮಾಹಿತಿ ಹರಡಬೇಡಿ" ಎಂದರು. ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗೆ ಮಿತಿಗಳೇನಾದರೂ ಇರುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ನಾವು ಏನು ತೀರ್ಮಾನ ಮಾಡುತ್ತೇವೆಂದು ತಿಳಿಸುತ್ತೇವೆ. ಇದು ನನ್ನೊಬ್ಬನ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ. ನುಡಿದಂತೆ ನಡೆಯುತ್ತೇವೆ" ಎಂದರು.
ಇದನ್ನೂ ಓದಿ :ಸಚಿವ ಸಂಪುಟ ರಚನೆ: ಆಕಾಂಕ್ಷಿಗಳ ಪಟ್ಟಿಯೊಂದಿಗೆ ಸಿದ್ದರಾಮಯ್ಯ, ಡಿಕೆಶಿ ಇಂದು ದೆಹಲಿಗೆ