ಕರ್ನಾಟಕ

karnataka

ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್

ETV Bharat / videos

ಕಾಂಗ್ರೆಸ್​ ಸಿಎಂ ಆಯ್ಕೆಗಾಗಿ ಏಕಸಾಲಿನ ನಿರ್ಣಯ, ರಹಸ್ಯ ಮತದಾನ: ಬಿ ಕೆ ಹರಿಪ್ರಸಾದ್ - cm selection row

By

Published : May 15, 2023, 3:41 PM IST

ಬೆಂಗಳೂರು:ಬೆಂಗಳೂರಿನ ಶಾಂಗ್ರಿಲಾ ಹೋಟೆಲ್​ನಲ್ಲಿ ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್​ ನಿರ್ಧರಿಸಲಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಬಿ. ಕೆ ಹರಿಪ್ರಸಾದ್ ತಿಳಿಸಿದರು.

ಕಾಂಗ್ರೆಸ್​ ವೀಕ್ಷಕರು, ಗೆಲುವು ಸಾಧಿಸಿದ ಎಲ್ಲ ಕಾಂಗ್ರೆಸ್​ ಅಭ್ಯರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಸಿಎಲ್​ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಂದು ಸಾಲಿನ ನಿರ್ಣಯವನ್ನು ಪಡೆದಿದ್ದಾರೆ. ಸಿಎಂ ಆಯ್ಕೆ ಪ್ರಕ್ರಿಯೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ವಿವೇಚನೆ ಬಿಡಲಾಗಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್​​ ಇದನ್ನು ಸುಲಲಿತವಾಗಿ ನಿರ್ವಹಿಸಲಿದೆ ಎಂದು ಅವರು ಹೇಳಿದರು.

ಗೆಲುವು ಸಾಧಿಸಿದ ನೂತನ ಅಭ್ಯರ್ಥಿಗಳು ರಹಸ್ಯವಾಗಿ ಮತದಾನ ಮಾಡಿದ್ದಾರೆ. ಏಕ ಸಾಲಿನ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ವೀಕ್ಷಕರಾದ ಸುಶೀಲ್​ಕುಮಾರ್​ ಶಿಂಧೆ, ಜೀತೇಂದ್ರ ಸಿಂಗ್​, ದೀಪಕ್​ ಬಹುರಿಯಾ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ಪಯಣಿಸಿದ್ದಾರೆ. ಅಲ್ಲಿಯೇ ಇದೆಲ್ಲವೂ ನಿರ್ಣಯವಾಗಲಿದೆ. ಸೋನಿಯಾ, ರಾಹುಲ್​ ಗಾಂಧಿ ಅವರೇ ಸಿಎಂ ಘೋಷಣೆ ಮಾಡಲಿದ್ದಾರೆ ಎಂದು ಹರಿಪ್ರಸಾದ್​ ಸ್ಪಷ್ಟಪಡಿಸಿದರು.

ಸಿಎಂ ಆಯ್ಕೆ ವಿಚಾರವಾಗಿ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಕೈಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಸಹ ಇಂದೇ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಓದಿ:135 ಸ್ಥಾನಗಳೇ ನನಗೆ ರಾಜ್ಯದ ಜನರು ನೀಡಿದ ಜನ್ಮದಿನದ ಬಹುದೊಡ್ಡ ಗಿಫ್ಟ್​: ಡಿ.ಕೆ.ಶಿವಕುಮಾರ್​

ABOUT THE AUTHOR

...view details