Congress Protest: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಕರ ಪ್ರತಿಭಟನೆ.. ವಿಡಿಯೋ - ಅನ್ನಭಾಗ್ಯ ಯೋಜನೆ
ರಾಯಚೂರು: ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ ಅಕ್ಕಿಗೆ ಪೂರೈಕೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಶಾಸಕರು ನಗರದಲ್ಲಿಂದು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಆಶಾಪುರ ರಸ್ತೆಯಲ್ಲಿರುವ ಭಾರತ ಆಹಾರ ನಿಗಮದ ಗೋದಾಮು ಮುಂದೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಡವರಿಗೆ ಉಚಿತವಾಗಿ ಅಕ್ಕಿ ನೀಡುವುದಕ್ಕೆ ಸಿಎಂ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿ ಬಡವರ ಹೊಟ್ಟೆ ತುಂಬಿಸುವ ಸಲುವಾಗಿ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ಹೀಗಾಗಿ ಫಲಾನುಭವಿಗಳಿಗೆ ಹಂಚಿಕೆ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ 2023 ಜೂನ್ 6ರಂದು ಎಫ್‌ಸಿಐಗೆ ಪತ್ರ ಬರೆದರು. ಇದಕ್ಕೆ 2023 ಜೂನ್ 6ರಂದು ಸ್ವೀಕರಿಸಿ, 2023 ಜೂನ್ 12 ರಂದು ಕ್ವಿಂಟಾಲ್‌ಗೆ 3400 ರೂಪಾಯಿ ದರ ನಿಗದಿ ಮಾಡಿ ಅಕ್ಕಿ ಪೂರೈಸುವುದಾಗಿ ಉತ್ತರವನ್ನೂ ನೀಡಿತ್ತು. ಆದರೆ ಈಗ ಅಕ್ಕಿಯನ್ನು ನೀಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆಯಡಿ ಬರುವ ಫಲಾನುಭವಿಗಳಿಗೆ ಒಟ್ಟು 2.38 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆಯಿದ್ದು, ಇದನ್ನು ಖರೀದಿ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಅಕ್ಕಿಯನ್ನು ಪೂರೈಕೆ ಮಾಡಲು ರಾಜಕೀಯ ಮಾಡುತ್ತಿಲ್ಲ ಎನ್ನುತ್ತಿದೆ. ಈ ಮೂಲಕ ಬಡವರ ಹೊಟ್ಟೆಯ ಮೇಲೆ ತಣ್ಣೀರು ಹಾಕಿದೆ. ಜೊತೆಗೆ ಬಡವರ ಅಕ್ಕಿ ನೀಡುವ ಯೋಜನೆ 34 ರೂಪಾಯಿ ದರ ನೀಡಿದರೆ, ಎಥೆನಾಲ್‌ಗೆ 24 ರೂಪಾಯಿ ದರದಲ್ಲಿ ಕೊಡುತ್ತಿದ್ದು, ಬೇರೆ ಮೂಲಗಳಿಂದ ಎಥೆನಾಲ್ ಬಳಸಿಕೊಳ್ಳಬಹುದು, ಅಕ್ಕಿಯನ್ನು ಏಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ನಿರ್ಧಾರ ಖಂಡಿಸಿದ್ದು, ಕೂಡಲೇ ನಮ್ಮ ರಾಜ್ಯದ ಪಾಲಿನ ಅಕ್ಕಿಯನ್ನು ಕೊಡುವಂತೆ ಸೂಚನೆ ನೀಡುವುದಕ್ಕೆ ಆದೇಶ ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ರವಾನಿಸಿದರು.
ಇದನ್ನೂ ನೋಡಿ:Congress protest: ಅನ್ನಭಾಗ್ಯದ ಅಕ್ಕಿ ವಿವಾದ.. ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್