ನಗು ನಗುತ್ತಲೇ ಮುಖಾಮುಖಿಯಾದ ಸಿದ್ದರಾಮಯ್ಯ - ಬೊಮ್ಮಾಯಿ... ವಿಡಿಯೋ ನೋಡಿ - ನಗು ನಗುತ್ತಲೇ ಮುಖಾಮುಖಿ
ಬೆಳಗಾವಿ: ದಿನದಿಂದ ದಿನಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಿದ್ದಿಗೆ ಬಿದ್ದು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದ ನಾಯಕರು ಚುನಾವಣಾ ಪ್ರಚಾರ ಅಖಾಡಕ್ಕೆ ಧುಮುಕಿದ್ದಾರೆ. ಆರೋಪ, ಪ್ರತ್ಯಾರೋಪಗಳ ಮೂಲಕ ಮತದಾರರ ಮನ ಸೆಳೆಯಲು ಭರ್ಜರಿ ಕಸರತ್ತು ನಡೆಸಲಾಗುತ್ತಿದೆ. ಇದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖಾಮುಖಿಯಾಗಿರುವುದು ಗಮನ ಸಳೆಯುವಂತೆ ಮಾಡಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಉಭಯ ನಾಯಕರು ಸಹ ಖುಷಿಯಿಂದಲೇ ಮುಖಾಮುಖಿಯಾಗಿ ಪರಸ್ಪರ ಹಸ್ತಲಾಘವ ಮಾಡಿದ್ದಾರೆ. ಅಲ್ಲದೇ, ಇಬ್ಬರೂ ಕೂಡ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಸಿದ್ದರಾಮಯ್ಯ ಅವರು ಬೊಮ್ಮಾಯಿ ಹೆಗಲ ಮೇಲೆ ಕೈ ಹಾಕಿ ತಟ್ಟುತ್ತಾರೆ. ನಂತರ ಮುಂದೆ ಸಾಗುವಾಗ ಬೊಮ್ಮಾಯಿ ಕೂಡ ಸಿದ್ದರಾಮಯ್ಯನವರ ಬೆನ್ನ ಮೇಲೆ ಕೈ ಹಾಕಿ ಮಾತನಾಡುತ್ತಾರೆ. ಹೀಗೆ ಇಬ್ಬರು ನಗು ನಗುತ್ತಲೇ, ಸಂತೋಷದಿಂದ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ವೇಳೆ ಶಾಸಕ ಅನಿಲ ಬೆನಕೆ, ಮಾಜಿ ಶಾಸಕರಾದ ಫಿರೋಜ್ ಸೇಠ್, ಸಂಜಯ್ ಪಾಟೀಲ್ ಸೇರಿ ಇತರ ನಾಯಕರು ಇದ್ದರು.
ಇದನ್ನೂ ಓದಿ:ಮೈಸೂರು: ಹೋಟೆಲ್ನಲ್ಲಿ ದೋಸೆ ಸವಿದ ಪ್ರಿಯಾಂಕಾ ಗಾಂಧಿ..!