ಗುಜರಾತ್ ಚುನಾವಣೆ: ಎತ್ತಿನ ಗಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ.. - ಗುಜರಾತ್‌ನ 2022ರ ವಿಧಾನಸಭಾ ಚುನಾವಣೆ
ರಾಜ್‌ಕೋಟ್(ಗುಜರಾತ್): ಗುಜರಾತ್‌ನ 2022ರ ವಿಧಾನಸಭಾ ಚುನಾವಣೆ ಈಗ ಪ್ರಚಾರದ ಕೇಂದ್ರ ಬಿಂದುವಾಗಿದೆ. ಗುಜರಾತ್ನಲ್ಲಿ ಬಿಜೆಪಿ ಆಮ್ ಆದ್ಮಿ ಕಾಂಗ್ರೆಸ್ ನಡುವೆ ತ್ರಿಕೋನ ಪೈಪೋಟಿ ಇದೆ. ರಾಜ್‌ಕೋಟ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಹಿತೇಶ್ ವೋರಾ ಅವರು ವಿಭಿನ್ನವಾಗಿ ಎತ್ತಿನ ಗಾಡಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಎತ್ತಿನ ಬಂಡಿ ಏರಿ ಮಾತನಾಡಿದ ಹಿತೇಶ್ ವೋರಾ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ ದಾಟಿದೆ ಎಂದು ಹೇಳಿದರು. ಹಣದುಬ್ಬರವು ಅನಿಯಂತ್ರಿತವಾಗಿದೆ. ಇಂದು ಅವರು ಪ್ರತಿಭಟನೆಯ ಭಾಗವಾಗಿ ಎತ್ತಿನ ಗಾಡಿಯಲ್ಲಿ ಕಚೇರಿಗೆ ಬಂದರು. ಈ ವಿಶಿಷ್ಟ ಪ್ರಚಾರವು ಸಾರ್ವಜನಿಕರಿಗೆ ಆಶ್ಚರ್ಯಕರವಾಗಿತ್ತು. ಹಿತೇಶ್ ವೋರಾ ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದ್ದರು.
Last Updated : Feb 3, 2023, 8:33 PM IST