ಕರ್ನಾಟಕ

karnataka

ETV Bharat / videos

ಹರಿಯಾಣದ ಖೇರ್ಲಿ ಲಾಲಾದಿಂದ ಪುನಾರಂಭಗೊಂಡ ಭಾರತ್​ ಜೋಡೋ ಯಾತ್ರೆ.. ರಾಹುಲ್​ ಜತೆ ಗಣ್ಯರು!

By

Published : Dec 23, 2022, 10:15 AM IST

Updated : Feb 3, 2023, 8:36 PM IST

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ಇಂದು ಮುಂಜಾನೆ ಹರಿಯಾಣದ ಖೇರ್ಲಿ ಲಾಲಾದಿಂದ ಸೋಹ್ನಾದಲ್ಲಿ ಪುನಾರಂಭಗೊಂಡಿದೆ. ಬುಧವಾರ ರಾಜಸ್ಥಾನದಿಂದ ಹರಿಯಾಣ ನುಹ್​ ಪ್ರವೇಶಿಸಿದ್ದ ಪಾದಯಾತ್ರೆಯಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್​ ನಾಯಕರು ಭಾಗವಹಿಸಿದ್ದರು. ಸೆ. 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳನ್ನು ಹಾದು ಹರಿಯಾಣವನ್ನು ತಲುಪಿದೆ. ಹರಿಯಾಣದಲ್ಲಿ ಮೊದಲ ಹಂತದ ಯಾತ್ರೆ ಇಂದು ಮುಕ್ತಾಯವಾಗಲಿದ್ದು, ಜ. 6ರಂದು ಎರಡನೇ ಹಂತದ ಯಾತ್ರೆ ಪ್ರಾರಂಭವಾಗಲಿದೆ. ಉತ್ತರ ಪ್ರದೇಶದಿಂದ ಪಾಣಿಪತ್ ಜಿಲ್ಲೆಯ ಸನೋಲಿ ಖುರ್ದ್‌ ಮೂಲಕ ಹರಿಯಾಣಕ್ಕೆ ಮರುಪ್ರವೇಶಿಸುವ ಮೂಲಕ ಪ್ರಾರಂಭಗೊಳ್ಳಲಿದೆ.
Last Updated : Feb 3, 2023, 8:36 PM IST

ABOUT THE AUTHOR

...view details