ಜೆಡಿಎಸ್ ಪರಿವಾರ ರಾಜನೀತಿ ಉಳಿಸಲು ಮತ ಕೇಳುತ್ತಿದೆ:ಕಾಂಗ್ರೆಸ್ ವಿರುದ್ಧವೂ ಮೋದಿ ವಾಗ್ದಾಳಿ
ಸಿಂಧನೂರು (ರಾಯಚೂರು):ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದರು. ಸಭೆಯನ್ನುದ್ದೇಶಿಸಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಅವರು, ಭತ್ತದ ಕಣಜ ರಾಯಚೂರು ಜಿಲ್ಲೆಯ ನನ್ನ ಸಹೋದರ - ಸಹೋದರಿಯರಿಗೆ ನನ್ನ ನಮಸ್ಕಾರಗಳು. ಜಗಜ್ಯೋತಿ ಬಸವೇಶ್ವರ ಹಾಗೂ ರಾಘವೇಂದ್ರ ಸ್ವಾಮೀಜಿಗೆ ನನ್ನ ಪ್ರಣಾಮಗಳು ಎಂದು ಹೇಳಿದರು. ಅಲ್ಲದೇ, ಬಿಜೆಪಿ ಕರ್ನಾಟವನ್ನು ಅಭಿವೃದ್ಧಿಯಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ಯುವ ನಿರ್ಧಾರ ಮಾಡಿದೆ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರಕ್ಕೆ ಒಂದು ಸಂಕಲ್ಪ ಇದೆ. ಅದೇನೆಂದರೆ ಕರ್ನಾಟಕವನ್ನು ಅಭಿವದ್ಧಿಯಲ್ಲಿ ನಂಬರ್ ಒನ್ ಮಾಡಲು ಬಯಸುತ್ತದೆ. ಹೀಗಾಗಿ ಈ ಒಂದು ಉದ್ದೇಶ ಗುರಿಯನ್ನು ಇಟ್ಟುಕೊಂಡು ಬಿಜೆಪಿ ಇಂದು ಮತಯಾಚನೆಯನ್ನು ಮಾಡುತ್ತಿದೆ. ಆದರೆ ಕಾಂಗ್ರೆಸ್ ತಾವು ನಿವೃತ್ತಿ ಆಗಲು ಕೊನೆಯ ಚುನಾವಣೆಗಾಗಿ ಮತ ಹಾಕಿ ಎಂದು ಕೇಳುತ್ತಿದೆ. ಜೆಡಿಎಸ್ ಪರಿವಾರ ರಾಜನೀತಿ ಉಳಿಸಲು ಮತ ಕೇಳುತ್ತಿದೆ. ಇಷ್ಟೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಹೀಗಾಗಿ ಕರ್ನಾಟಕದಲ್ಲಿ ಒಂದೇ ಒಂದು ಮಾತು ಕೇಳಿ ಬರುತ್ತಿದೆ. ಅದೇನೆಂದರೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಸಮಾವೇಷದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹೇಳಿದರು.
ರಾಷ್ಟ್ರಕ್ಕೆ ಬಿಕ್ಕಟ್ಟು ಬಂದಾಗಲೆಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಆ ವಿಚಾರದ ಮೇಲೆಯೇ ರಾಜಕೀಯ ಮಾಡಿತು. ಇದೀಗ, ಸುಡಾನ್‌ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ನಾವು ಅಲ್ಲಿಂದ ಪ್ರತಿಯೊಬ್ಬ ಭಾರತೀಯನನ್ನು ಸುರಕ್ಷಿತವಾಗಿ ಮರಳಿ ಕರೆತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ನಾಯಕರು ಅದಕ್ಕೂ ರಾಜಕೀಯ ಮಾಡಿದರು. ಮತ್ತು ಇಲ್ಲಿ ಹಲವಾರು ಕುಟುಂಬಗಳನ್ನು ಪ್ರಚೋದಿಸಲು ಪ್ರಯತ್ನಿಸಿದರು' ಎಂದು ಪ್ರಧಾನಿ ನರೇಂದ್ರ ಮೋದಿ ಸಿಂಧನೂರಿನಲ್ಲಿ ಆರೋಪಿಸಿದ್ದಾರೆ.
'ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಮಾಡಿದ ಲೂಟಿಯ ರೀತಿಯ ಅಭಿವೃದ್ಧಿಯ ಫಲವು ಹಳ್ಳಿಗಳನ್ನು ತಲುಪಲು ಬಿಡಲಿಲ್ಲ. ಕಾಂಗ್ರೆಸ್‌ನ ಪ್ರಧಾನಿ ಸ್ವತಃ ಹೇಳಿದರು, ದೆಹಲಿ 1 ರೂಪಾಯಿ ಕಳುಹಿಸುತ್ತದೆ. ಆದರೆ ಕೇವಲ 15 ಪೈಸೆ ನೆಲಕ್ಕೆ ತಲುಪುತ್ತದೆ. 85 ಪೈಸೆ ಕಳ್ಳತನವಾಗುತ್ತದೆ. 85 ಪೈಸೆ ಲೂಟಿ ಮಾಡುತ್ತಿದ್ದ ಆ 'ಪಂಜಾ' ಯಾವುದು? ಕಾಂಗ್ರೆಸ್ ತನ್ನ ಚಿತ್ರವನ್ನು 85 ಪೈಸೆ ಕಮಿಷನ್ ಸರ್ಕಾರ ಎಂದು ಮಾಡಿಕೊಂಡಿದೆ' ಎಂದು ಸಿಂಧನೂರದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ:ಮೋದಿ ಜೀ ಭಾಷಣದಲ್ಲಿ ನಿಮ್ಮ ಬಗ್ಗೆ ಹೇಳಬೇಡಿ, ಜನರ ಬಗ್ಗೆ ಮಾತನಾಡಿ: ರಾಹುಲ್ ಗಾಂಧಿ