ಕರ್ನಾಟಕ

karnataka

ಹಾಡು ಹಾಡುತ್ತಾ ಟಿಕೆಟ್​ ನೀಡುವ ರಾಯಚೂರಿನ ಕಂಡಕ್ಟರ್: ವಿಡಿಯೋ ​

ETV Bharat / videos

ಹಾಡು ಹಾಡುತ್ತ ಟಿಕೆಟ್​ ನೀಡುವ ರಾಯಚೂರಿನ ಕಂಡಕ್ಟರ್.. ಮಹಿಳೆಯರು ಕಿಲ ಕಿಲ - ವಿಡಿಯೋ ​ - ಹಾಡು ಹಾಡುತ್ತ ಟಿಕೆಟ್​ ನೀಡುವ ರಾಯಚೂರಿನ ಕಂಡಕ್ಟರ್

By

Published : Jun 24, 2023, 7:00 PM IST

ರಾಯಚೂರು:ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಿಂದ ಪ್ರತಿದಿನ ಲಕ್ಷಾಂತರ ಮಹಿಳೆಯರು ಉಚಿತ ಬಸ್​ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಬಸ್​ ಪ್ರಯಾಣಕ್ಕೆ ಕೆಲವು ಕಡೆ ಮಹಿಳಾ ಪ್ರಯಾಣಿಕರು ಮುಗಿಬೀಳುತ್ತಿರುವ ಹಿನ್ನೆಲೆ ತಳ್ಳಾಟ, ನೂಕಾಟ ಸೇರಿದಂತೆ ಕೆಲವೆಡೆ ಜಡೆ ಜಗಳಗಳು ಸಹ ನಡೆದಿವೆ. ಇತ್ತೀಚಿಗೆ ಫ್ರೀ ಬಸ್​ನಲ್ಲಿ ಸೀಟ್​​ಗಾಗಿ ಮಾರಾಮಾರಿ ನಡೆದಿರುವ ವಿಡಿಯೋಗಳು ಸಾಮಾಜಿಕ ಜಾಣತಾಣಗಳಲ್ಲಿ ವೈರಲ್​ ಕೂಡ ಆಗಿವೆ.

ಆದರೆ ರಾಯಚೂರಿನಲ್ಲಿ ಬಸ್​ ಕಂಡಕ್ಟರ್​ವೊಬ್ಬರು ಹಾಡನ್ನು ಹಾಡುತ್ತ ಬಸ್​ನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ವಿಡಿಯೋ ತುಣುಕುವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು, ರಾಯಚೂರು ಜಿಲ್ಲೆಯ ಎನ್​ಇಕೆಎಸ್​ಆರ್​ಟಿಸಿಯಲ್ಲಿ ನಿರ್ವಾಹಕರಲ್ಲಿ ಜೂನಿಯರ್ ಡಾ. ರಾಜಕುಮಾರ್​ ಎಂದು ಹೆಸರು ಪಡೆದಿರುವ ಅರಕೇರಾ ಗ್ರಾಮದ ಗುರು ದೇವರಮನಿ ಹಾಡು ಹಾಡುತ್ತಾ ಟಿಕೆಟ್ ಕೊಡುತ್ತಿದ್ದಾರೆ. 

ಎಲ್ಲಾ ಅಕ್ಕ-ತಂಗಿಯರಿಗಾಗಿ, ತಂದೆ-ತಾಯಿಯವರಿಗಾಗಿ ಟಿಕೆಟ್ ಪ್ಲೀಸ್ ಎಂದು, ಎಲ್ಲಾದರು ಇರು ಎಂತಾದರೂ ಇರು. ಎಂದೆಂದಿಗೂ ನೀ ಫ್ರೀ ಬಸ್ ಪ್ರಯಾಣ ಮಾಡ್ತಿರು.. ಸಿದ್ದರಾಮಯ್ಯನವರು ತಂದಿರುವ ಸ್ತ್ರೀ ಶಕ್ತಿ ಯೋಜನೆ ಇದು ಎಂದು ಪ್ರಯಾಣಿಕರಿಗೆ ಮನರಂಜನೆ ಒದಗಿಸುತ್ತಿದ್ದಾರೆ. ಫ್ರೀ ಟಿಕೆಟ್ ಜೊತೆಗೆ ಮಹಿಳೆಯರಿಗೆ ಉಚಿತವಾಗಿ ಮನರಂಜನೆ ಸಹ ಸಿಗುತ್ತಿದೆ.

ಇದನ್ನೂ ಓದಿ:ಬೀದರ್​ನಲ್ಲಿ ಸೀಟಿಗಾಗಿ ಮಹಿಳೆಯರ ಕಿತ್ತಾಟ- ಹುಬ್ಬಳ್ಳಿಯಲ್ಲಿ ವೃದ್ಧೆಗೆ ಕಪಾಳಮೋಕ್ಷ: ವಿಡಿಯೋ ಜಾಲತಾಣದಲ್ಲಿ ವೈರಲ್​

ABOUT THE AUTHOR

...view details