ಕರ್ನಾಟಕ

karnataka

ಭಾರಿ ಗಾಳಿ‌ಮಳೆಗೆ ಉರುಳಿ ಬಿದ್ದ ತೆಂಗಿನ ಮರ

ETV Bharat / videos

ಸೊರಬ: ಭಾರಿ ಗಾಳಿ‌ಮಳೆಗೆ ಉರುಳಿ ಬಿದ್ದ ತೆಂಗಿನ ಮರ.. ಮನೆ-ಕಾರಿಗೆ ಹಾನಿ - ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

By

Published : Jul 24, 2023, 7:56 PM IST

ಶಿವಮೊಗ್ಗ: ಸೊರಬ ಪಟ್ಟಣದ ಆನೆಮುಡಿಕೆ ರಸ್ತೆಯಲ್ಲಿ ಬಿರುಸಿನ ಗಾಳಿ ಮಳೆಗೆ ತೆಂಗಿನ ಮರವೊಂದು ಉರುಳಿ ಬಿದ್ದು, ಸಿಮೆಂಟ್ ಗೋದಾಮು ಹಾಗೂ ಕಾರ್ ಶೆಡ್​ಗೆ ಹಾನಿಯಾಗಿದೆ. 

ಕಾಕಡೆ ಕುಟುಂಬಸ್ಥರ ಮನೆಯ ಹಿಂಭಾಗದ ಬೃಹತ್ ಗಾತ್ರದ ತೆಂಗಿನ ಮರವೊಂದು ಸೋಮವಾರ ಬೆಳಗಿನ ಜಾವ ಉರುಳಿ ಬಿದ್ದಿದೆ. ಪರಿಣಾಮ ಗೋದಾಮಿನಲ್ಲಿದ್ದ ಶ್ರೀ ರೇಣುಕಾಂಬ ಟ್ರೇಡರ್ಸ್​ನ ತೇಜಪ್ಪ ಅವರಿಗೆ ಸೇರಿದ ಸುಮಾರು 50 ಚೀಲ ಸಿಮೆಂಟ್ ಮಳೆ ನೀರಿಗೆ ಹಾನಿಯಾಗಿದ್ದು, ಗೋದಾಮು ಸಹ ಜಖಂ ಆಗಿದೆ. 

ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ: ವಿಶ್ವನಾಥ ಎಂಬುವವರ ವಾಸದ ಮನೆ ಹಿಂಭಾಗದ ಕಾರು ಶೆಡ್ ಮೇಲೆ ಮರ ಬಿದ್ಧ ಪರಿಣಾಮ ಅವರ ಕಾರು ಸೇರಿದಂತೆ ಗೋದಾಮಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಮರವು ವಿದ್ಯುತ್ ತಂತಿಯ ಮೇಲೆಯೂ ಬಿದ್ದಿದೆ. ಹೀಗಾಗಿ, ಆನೆ‌ಮುಡಿಕೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ. 

ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಮರ : ಮತ್ತೊಂದೆಡೆ ಸಾಗರ ತಾಲೂಕಿನ ಆನಂದಪುರ ಸಮೀಪದ ಗಿಳಲಗುಂಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರ ಬಿದ್ದು 2 ಗಂಟೆಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಗಾಳಿ ಮಳೆಗೆ ರಸ್ತೆ ಪಕ್ಕದ ಬೃಹತ್ ಮರ ದಿಢೀರನೆ ನೆಲಕ್ಕುರುಳಿದೆ. ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಾಗರದಿಂದ ಶಿವಮೊಗ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಮರ ಬಿದ್ದು ವಾಹನ ಸವಾರರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು.  

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಮರ ತೆರವಿಗೆ ಸಹಾಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಶಾಸಕರು ಸ್ಥಳಕ್ಕಾಗಮಿಸಿ ಸ್ಥಳೀಯರು ಹಾಗೂ ಸಿಬ್ಬಂದಿ ಜೊತೆಗೂಡಿ ಮರ ತೆರವು ಕಾರ್ಯಕ್ಕೆ ಸಹಾಯ ಮಾಡಿದರು.‌ 

ಇದನ್ನೂ ಓದಿ:ಮುಂದುವರಿದ ವರುಣನ ಆರ್ಭಟ: ಧರೆಗುರುಳಿದ ಮನೆಗಳು, ಜನಜೀವನ ಅಸ್ತವ್ಯಸ್ತ..! ಹೀಗಿದೆ ಜಲಾಶಯಗಳ ನೀರಿನ ಮಟ್ಟ!

ABOUT THE AUTHOR

...view details