ಈಜಿಪ್ಟ್ನಿಂದ ಬಂದ ಹಡಗಿನಲ್ಲಿ 200 ಕೋಟಿ ಮೌಲ್ಯದ ಕೊಕೇನ್ ಪತ್ತೆ!
Published : Dec 1, 2023, 8:33 PM IST
ಪಾರಾದೀಪ್ (ಒಡಿಶಾ): ಇಲ್ಲಿನ ಬಂದರಿನಲ್ಲಿ ಸರಕು ಸಾಗಣೆಯ ಮಾಡುವ ಹಡಗಿನಿಂದ 200 ಕೋಟಿ ರೂಪಾಯಿ ಮೌಲ್ಯದ 22 ಪ್ಯಾಕೆಟ್ ಕೊಕೇನ್ ಅನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ. ಕೊಕೇನ್ ಕಳ್ಳಸಾಗಣೆಯ ಮೂಲಕ ಭಾರತಕ್ಕೆ ಬರುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಕಸ್ಟಮ್ಸ್ ಮತ್ತು ಸಿಐಎಸ್ಎಫ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ತಪಾಸಣೆ ವೇಳೆ ಅಕ್ರಮ ಮಾದಕ ವಸ್ತು ಇರುವುದು ಪತ್ತೆಯಾಗಿದೆ.
ಹಡಗು ಈಜಿಪ್ಟ್ ಹಾಗೂ ಇಂಡೋನೇಷ್ಯಾಗಳನ್ನು ದಾಟಿ ಪಾರಾದೀಪ್ ಬಂದರಿಗೆ ಬಂದಿತ್ತು. ಪಾರದೀಪ್ ಬಂದರಿನಿಂದ ಸ್ಟೀಲ್ ಪ್ಲೇಟ್‌ಗಳನ್ನು ಹೊತ್ತು ಡೆನ್ಮಾರ್ಕ್‌ಗೆ ಒಯ್ಯುತ್ತಿತ್ತು. ಸ್ಟೀಲ್ ಪ್ಲೇಟ್‌ಗಳನ್ನು ಲೋಡ್ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ, ಮೂಲವೊಂದು ಹಡಗಿನಲ್ಲಿ ಕೊಕೇನ್ ಇರುವ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಿದೆ. ಮಾಹಿತಿ ಪಡೆದ ಸಿಐಎಸ್ಎಫ್, ಕೋಸ್ಟ್ ಗಾರ್ಡ್ ಮತ್ತು ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಎರಡು ಗಂಟೆಗಳ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ಮೊದಲು 10 ಕೋಕೂನ್ ಪ್ಯಾಕೆಟ್ ದೊರೆತಿದೆ. ನಂತರ ಸಂಜೆ 4 ಗಂಟೆಯವರೆಗೆ ಹಡಗನ್ನು ತಪಾಸಣೆ ನಡೆಸಲಾಯಿತು. ಈ ವೇಳೆಗೆ ಒಟ್ಟು 22 ಪ್ಯಾಕೆಟ್ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ನಂತರ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ತನಿಖಾ ಸಂಸ್ಥೆ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ:ಕೇರಳದಲ್ಲಿ ಇಸ್ರೇಲಿ ಮಹಿಳೆ ಸಾವು; ಲಿವ್ಇನ್ ಪಾರ್ಟ್ನರ್ ಆಸ್ಪತ್ರೆಗೆ ದಾಖಲು