ಕರ್ನಾಟಕ

karnataka

ಬಾಟಲಿಯಿಂದ ಸರತಿ ಸಾಲಿನಲ್ಲಿ ನೀರು ಕುಡಿದ ಎರಡು ನಾಗರಹಾವುಗಳು

ETV Bharat / videos

ಬಾಟಲಿಯಿಂದ ಸರತಿ ಸಾಲಿನಲ್ಲಿ ನೀರು ಕುಡಿದ ಎರಡು ನಾಗರಹಾವುಗಳು: ವಿಡಿಯೋ ವೈರಲ್ - ನಾಗರಹಾವು

By

Published : Mar 28, 2023, 10:57 PM IST

ಕೊರ್ಬಾ (ಛತ್ತೀಸ್‌ಗಢ): ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ಮನುಷ್ಯರೇ ನಿತ್ರಾಣಗೊಳ್ಳುವಂತಹ ವಾತಾವರಣ ಇದೆ. ಪ್ರಾಣಿ ಪಕ್ಷಗಳು ಕೂಡ ಬಾಯಾರಿಕೆಯಿಂದ ಕಂಗೆಡುವಂತಾಗಿದೆ. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಬಿಸಿಲ ಬೇಗೆಯಿಂದ ಎರಡು ನಾಗರಹಾವುಗಳು ಬಾಟಲಿಯಿಂದ ನೀರು ಕುಡಿಯುತ್ತಿರುವ ವಿಡಿಯೋ ವೈರಲ್​ ಆಗಿದೆ. 

ನಾಗರಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಕೊರ್ಬಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಾಗರ ಹಾವುಗಳು ಕಾಣಿಸಿಕೊಳ್ಳುತ್ತಿವೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ಬಾರಿ ಈ ನಾಗರಹಾವುಗಳು ಜನವಸತಿ ಪ್ರದೇಶಗಳಲ್ಲೂ ಬರುತ್ತವೆ. ಸ್ನೇಕ್​ ಮಾಸ್ಟರ್​ಗಳು ಅವುಗಳನ್ನು ರಕ್ಷಿಸಿ ಮತ್ತೆ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆ ಇತ್ತೀಚೆಗೆ ಕಾಡಿಗೆ ಬಿಡುತ್ತಿರುವಾಗ ಎರಡು ನಾಗರಹಾವುಗಳು ಬಾಯಾರಿಕೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದನ್ನು ಅರಿತ ಸ್ನೇಕ್​ ಮಾಸ್ಟರ್​ಗಳು ಬಾಟಲಿ ಮೂಲಕ ನೀರು ಕುಡಿಸಿ ನಾಗರಹಾವುಗಳ ದಣಿವು ತಣಿಸಿದ್ದಾರೆ.

ಈ ಬಗ್ಗೆ ಹಾವುಗಳ ರಕ್ಷಣೆ ತಂಡದ ಪ್ರಮುಖ ಜಿತೇಂದ್ರ ಸಾರಥಿ ಪ್ರತಿಕ್ರಿಯಿಸಿ, ಕೊರ್ಬಾದಲ್ಲಿ ರಕ್ಷಣೆ ಮಾಡಿದ್ದ ಎರಡು ನಾಗರಹಾವುಗಳನ್ನು ಅರಣ್ಯಕ್ಕೆ ಬಿಡಲು ತೆರಳಲಾಗಿತ್ತು. ಎರಡೂ ನಾಗರ ಹಾವುಗಳನ್ನು ಕಾಡಿಗೆ ಬಿಡುವಾಗ ವಿಪರೀತ ಸೆಖೆಯಿಂದಾಗಿ ತಕ್ಷಣವೇ ಕೋಪದಿಂದ ಸಿಡುಕಲು ಪ್ರಾರಂಭಿಸಿದವು. ಆಗ ಬಾಯಾರಿಕೆಯಿಂದ ಕಂಗೆಟ್ಟಿರುವುದು ತಂಡದ ಸದಸ್ಯರಿಗೆ ಅರ್ಥವಾಯಿತು. ಅಂತೆಯೇ, ಎರಡೂ ನಾಗರಹಾವುಗಳಿಗೆ ಬಾಟಲಿಯಿಂದ ನೀರು ಕುಡಿಸಲಾಯಿತು. ಸರತಿ ಸಾಲಿನಲ್ಲಿ ತುಂಬಾ ಆರಾಮವಾಗಿ ನೀರು ಕುಡಿದವು ಎಂದು ತಿಳಿಸಿದ್ದಾರೆ. ಸದ್ಯ ಈ ಹಾವುಗಳು ನೀರು ಕುಡಿಯುವ ವಿಡಿಯೋ ವೈರಲ್​ ಆಗಿದೆ. 

ಇದನ್ನೂ ಓದಿ:ರಕ್ಷಿಸಲು ಹೋದಾಗ ಕಚ್ಚಿದ ಹಾವು.. ಹಿಡಿದು ಆಸ್ಪತ್ರೆಗೆ ಬಂದ ಭೂಪ, ಉರಗಕ್ಕೂ ಚಿಕಿತ್ಸೆ ಕೊಡಿಸಲು ಪಟ್ಟು

ABOUT THE AUTHOR

...view details