ಕರ್ನಾಟಕ

karnataka

ನಾಗರಹಾವಿನ ರಕ್ಷಣೆ

ETV Bharat / videos

ತುಮಕೂರು: ಆಹಾರ ಅರಸಿ ಕೋಳಿ ಫಾರಂಗೆ ನುಗ್ಗಿದ ಆರಡಿ ಉದ್ದದ ನಾಗರಹಾವು- ವಿಡಿಯೋ - ತುಮಕೂರಿನಲ್ಲಿ ನಾಗರಹಾವಿನ ರಕ್ಷಣೆ

By

Published : Aug 21, 2023, 5:57 PM IST

ತುಮಕೂರು : ಕೋಳಿ ಫಾರಂನಲ್ಲಿ ಮೊಟ್ಟೆ, ಕೋಳಿ ಮರಿಗಳನ್ನು ತಿನ್ನಲು ಬಂದಿದ್ದ ನಾಗರಹಾವನ್ನು ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಜಾಗೃತ ಸಂಸ್ಥೆಯ ಉರಗ ತಜ್ಞ ದಿಲೀಪ್ ಸುರಕ್ಷಿತವಾಗಿ ಸೆರೆ ಹಿಡಿದರು. ನಗರದ ಹೊರವಲಯದಲ್ಲಿರುವ ಬೆಳ್ಳಾವಿ ಗ್ರಾಮದ ನಿವಾಸಿ ನರಸಿಂಹಮೂರ್ತಿ ಎಂಬವರ ಕೋಳಿ ಶೆಡ್ಡಿನಲ್ಲಿ ಸುಮಾರು 6 ಅಡಿ ಉದ್ದದ ನಾಗರ ಕಾಣಿಸಿಕೊಂಡಿತ್ತು. ಹಾವು ಕಂಡ ಅವರು ವಾರಂಗಲ್ ವನ್ಯಜೀವಿ ತಂಡಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ದೇವರಾಯನ ದುರ್ಗಾ ಅರಣ್ಯಪ್ರದೇಶಕ್ಕೆ ಬಿಟ್ಟರು. 

ಕಾಳಿಂಗ ಸೆರೆ: ಒಂದು ವರ್ಷದಿಂದ ಗದ್ದೆಯಲ್ಲೇ ಮನೆ ಮಾಡಿಕೊಂಡಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಹರೀಂದ್ರ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೋಡಿಹಿತ್ಲು ಸಮೀಪದ ಹೊಸೂರು ಗ್ರಾಮದಲ್ಲಿ ಚಿದಂಬರ ಹೆಬ್ಬಾರ್ ಎಂಬವರ ಗದ್ದೆಯಲ್ಲಿ ಆ. 12ರಂದು ಘಟನೆ ನಡೆದಿತ್ತು.   

ಇದನ್ನೂ ಓದಿ : Watch video - ವರ್ಷದಿಂದ 15 ಅಡಿ ಉದ್ದದ ಬಿಲದಲ್ಲಿ ಬೃಹತ್ ಕಾಳಿಂಗ ಸರ್ಪ ವಾಸ.. ಗದ್ದೆಗೆ ಬರಲು ಕಾರ್ಮಿಕರ ಹಿಂದೇಟು: ಕೊನೆಗೂ ಕಾರ್ಯಾಚರಣೆ ಸಕ್ಸಸ್​

ABOUT THE AUTHOR

...view details