ಹೆಚ್ಚಿದ ಧಗೆ: ಹೊರಬರುತ್ತಿರುವ ಹಾವುಗಳು, ತಿಂಗಳಲ್ಲಿ 150 ಹಾವು ಹಿಡಿದ ತುಮಕೂರು ಉರಗ ತಜ್ಞ - ಉರಗ ತಜ್ಞ ದಿಲೀಪ್ ಕಾರ್ತಿಕ್ ಪಾಳೇಗಾರ
ತುಮಕೂರು: ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನದಿಂದ ಪಾರಾಗಲು ನಾಗರ ಹಾವುಗಳು ಮನೆಗಳ ಬಳಿ ಬಂದು ಅವಿತುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹೌದು ಬಿಸಿಲಿನ ಬೇಗೆಗೆ ತುಮಕೂರು ನಗರದಲ್ಲಿ ಹಾವುಗಳು ಮನೆಯನ್ನೇ ತಮ್ಮ ವಾಸಸ್ಥಾನಗಳನ್ನಾಗಿ ಮಾಡಿಕೊಂಡಿದೆ. ಇದೀಗ ತುಮಕೂರು ಗ್ರಾಮಾಂತರ ಕೋರ ಹೋಬಳಿ ಕಾಟೇನಹಳ್ಳಿ ನಿವಾಸಿ ಸೋಮ ಶೇಖರಯ್ಯ ಎಂಬುವರ ಮನೆಯ ಕಾಂಪೌಂಡ್ ಒಳಗೆ ಸುಮಾರು 5 ಅಡಿ ಉದ್ದದ ನಾಗರಹಾವು ಸೇರಿಕೊಂಡು ಗಾಬರಿ ಹುಟ್ಟಿಸಿತ್ತು. ತಕ್ಷಣ ಸೋಮಶೇಖರಯ್ಯ ಅವರು ವರಂಗಲ್ ಫೌಂಡೇಶನ್ ವನಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಯನ್ನು ಸಂಪರ್ಕಿಸಿದರು.
ಸ್ಥಳಕ್ಕೆ ಬಂದ ಸಂಸ್ಥೆಯ ಉರಗ ತಜ್ಞ ದಿಲೀಪ್ ಕಾರ್ತಿಕ್ ಪಾಳೇಗಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೃಹತ್ ಗಾತ್ರದ ನಾಗರಹಾವನ್ನು ಸೆರೆಹಿಡಿದಿದ್ದಾರೆ. ರಕ್ಷಣೆ ಮಾಡಿದ್ದ ಹಾವನ್ನು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ಈ ರೀತಿ ಮನೆಗೆ ಬಂದು ಸೇರಿಕೊಂಡ ಹಾವುಗಳನ್ನು ತುಮಕೂರಿನ ಉರಗ ತಜ್ಞ ದಿಲೀಪ್ ಎಂಬುವವರು ತಮ್ಮ ಸಂಸ್ಥೆಯ ಮೂಲಕ ಅನೇಕ ಯುವಕರನ್ನು ಬಳಸಿಕೊಂಡು ಒಂದು ತಿಂಗಳಲ್ಲಿ 150ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಬಿಸಿಲಿನ ತಾಪಮಾನ ಜಾಸ್ತಿ ಇರುವುದರಿಂದ ಅವುಗಳು ತಂಪಾದ ಜಾಗ ಅರಸಿ ಬರುತ್ತವೆ. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಬೇಕಿದೆ. ಆಗ ಹಾವುಗಳು ಬಂದು ಸೇರಿಕೊಳ್ಳುವುದು ಕಡಿಮೆಯಾಗುತ್ತದೆ.
ಇದನ್ನೂ ಓದಿ:ಕಾವಿಗೆ ಕುಳಿತ ಕೋಳಿ ಸಾಯಿಸಿ 9 ಮೊಟ್ಟೆ ನುಂಗಿದ ನಾಗರಹಾವು: ವಿಡಿಯೋ