ಕರ್ನಾಟಕ

karnataka

ನಾಗರಹಾವು ಸೆರೆ

ETV Bharat / videos

ಚಿಕ್ಕಮಗಳೂರು: ಏಕಲವ್ಯ ವಸತಿ ಶಾಲಾ ಆವರಣದಲ್ಲಿ ಭಾರಿ ಗಾತ್ರದ ನಾಗರಹಾವು ಸೆರೆ- ವಿಡಿಯೋ - ​ ETV Bharat Karnataka

By ETV Bharat Karnataka Team

Published : Nov 29, 2023, 8:20 PM IST

ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಏಕಲವ್ಯ ವಸತಿ ಶಾಲೆ ಆವರಣದಲ್ಲಿ ಪದೇ ಪದೆ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಬರೋಬ್ಬರಿ 5 ಅಡಿ ಉದ್ದದ ಭಾರಿ ಗಾತ್ರದ ನಾಗರಹಾವು ಸೆರೆ ಹಿಡಿಯಲಾಗಿದೆ. ಈ ನಾಗರಹಾವು ಶಾಲೆಯಲ್ಲಿ ಕೆಲ ದಿನದಿಂದ ವಾಸವಾಗಿತ್ತು. 

ಇಂದು ಕಾಣಿಸಿಕೊಂಡ ಹಾವು ಬಿಲದಲ್ಲಿ ಬೆಚ್ಚಗೆ ಹೋಗಿ ಸೇರಿಕೊಂಡಿತ್ತು. ಕೂಡಲೇ ಶಾಲೆ ಸಿಬ್ಬಂದಿಯವರು ಉರಗ ತಜ್ಞ ಆರಿಫ್​ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಉರಗ ತಜ್ಞ ಕಾರ್ಯಾಚರಣೆ ನಡೆಸಿ, ಬಿಲದಲ್ಲಿ ಮಲಗಿದ್ದ ಹಾವನ್ನು ರಕ್ಷಣೆ ಮಾಡಿದರು. ನಂತರ ಶಾಲೆಯ ಬಯಲಿನಲ್ಲಿ ಮಕ್ಕಳಿಗೆ ಹಾವಿನ ಬಗ್ಗೆ ಪಾಠ ಮಾಡಿ ಜಾಗೃತಿ ಮೂಡಿಸಿದರು. ಸೆರೆ ಹಿಡಿದ ಹಾವನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಶಾಲೆ ವಿದ್ಯಾರ್ಥಿಗಳು ಆವರಣದಲ್ಲಿ ಸೇರಿದ್ದು ವಿಶೇಷವಾಗಿತ್ತು. ಸೆರೆ ಹಿಡಿದ ಹಾವನ್ನು ಸುರಕ್ಷಿತವಾಗಿ ಚಾರ್ಮಡಿ ಘಾಟಿಯಲ್ಲಿ ಉರಗ ತಜ್ಞ ಆರಿಫ್ ಬಿಟ್ಟಿದ್ದಾರೆ. 

ಇದನ್ನೂ ಓದಿ :ಉಪ್ಪಿನಂಗಡಿ: ಬರೀ ಕೈಯಲ್ಲಿ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗತಜ್ಞ - ವಿಡಿಯೋ

ABOUT THE AUTHOR

...view details